* ನಾಪೋಕ್ಲು, ಜ. 31: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆ.3ರ ತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ತಾ. 30ರಂದು ಕ್ಷೇತ್ರದ ತಂತ್ರಿಯರಾದ ವೇದಮೂರ್ತಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಗಣಪತಿ ಹೋಮ ನಡೆದು, ಶ್ರೀಶಾಸ್ತಾವು, ಶ್ರೀ ಮಹಾಗಣಪತಿ, ಅನ್ನಪೂರ್ಣೇಶ್ವರಿ ದೇವರ ಹಾಗೂ ಕರಿಭೂತ ಕೋಮಾಳಿ ದೈವಗಳ ಪ್ರತಿಷ್ಠೆ ನಡೆಯಿತು. ಜೀವಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕಾರಣಿಕೆ ಹೆಸರುವಾಸಿಯಾದ ಶೀಶಾಸ್ತಾವು ಮತ್ತು ಕರಿಭೂತ ದೇವರ ಪ್ರತಿಷ್ಠಾ ಸಂದರ್ಭದಲ್ಲಿ ಶ್ರೀ ಜನಸ್ತೋಮವೇ ನೆರೆಯಿತು. ಮಧ್ಯಾಹ್ನ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಭಜನೆ ನೆರವೇರಿತು.