ಮಡಿಕೇರಿ, ಡಿ. 8: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಗಮ ಸಂಭ್ರಮ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯಿಂದ ಹೊರತರಲಾದ ಪುಸ್ತಕ ಹಾಗೂ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತರಲಾದ ಸಿಡಿ ಬಿಡುಗಡೆಗೊಳಿಸಲಾಯಿತು.

ಕವಿ ಕರವಟ್ಟಿರ ಅಪ್ಪಣ್ಣ ಅವರ ಸಿಂಗಾರ ಪೊಟ್ಟಿ ಕವನ ಸಂಕಲನ ವನ್ನು ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಪುಸ್ತಕ ಓದುವದರಿಂದ ಸಂಸ್ಕøತಿ, ಆಚಾರ - ವಿಚಾರಗಳನ್ನು ತಿಳಿದುಕೊಳ್ಳ ಲಾಗುವದು. ಇಂತಹ ಕಾರ್ಯಕ್ರಮ ಗಳಲ್ಲಿ ದೊರಕುವ ಪುಸ್ತಕಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳಬೇಕೆಂದರು.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರ ತರಲಾದ ಸೋಬಾನೆ ಸಂಪ್ರದಾಯದ ಸಿಡಿ ಬಿಡುಗಡೆಗೊಳಿಸಿದ ಸಾಹಿತಿ ಪ್ರೊ. ದಂಬೆಕೋಡಿ ಸುಶೀಲ ಮಾತನಾಡಿ, ಇಂತಹ ಕಾರ್ಯಕ್ರಮ ಗಳು ಮುಂದಿನ ಪೀಳಿಗೆಗೆ ಹೂರಣವಾಗಬೇಕು. ಪ್ರೀತಿ, ವಿಶ್ವಾಸ, ಸಹಬಾಳ್ವೆ ಮೂಡಿಸುವಂತಾಗಬೇಕು. ಪುಸ್ತಕಗಳು ವಿಚಾರಗಳ ಗ್ರಂಥಗಳಾಗಿರುತ್ತವೆ. ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಎಲ್ಲವನ್ನೂ ವಿಂಗಡಣೆ ಗಾಗಿ ಬಳಸುವ ಕಾಲಘಟ್ಟದಲ್ಲಿ ಸಂಭಾಷಣೆ, ಸಂವೇದನೆಯನ್ನು ಹಂಚಿಕೊಳ್ಳುವದು ಮುಖ್ಯ ಎಂದರು. ಸಾಕಷ್ಟು ಪುರಾತನವಾಗಿರುವ ಭಾಷೆಗಳು ಕನ್ನಡ ನಾಡಿನಲ್ಲಿವೆ. ಭಾಷೆಯನ್ನು ಉಳಿಸಿ ಬೆಳೆಸುವ ಗುರಿ ನಮ್ಮದಾಗಿರಬೇಕೆಂದರು.

ವೇದಿಕೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ರಿಜಿಸ್ಟ್ರಾರ್ ಉಮರಬ್ಬ, ಕವಿ ಕರವಟ್ಟಿರ ಬಿ. ಅಯ್ಯಣ್ಣ ಇದ್ದರು. ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ ಸ್ವಾಗತಿಸಿದರೆ, ನಿರೂಪಕಿ ಸುಮಿತ್ರ ನಿರೂಪಿಸಿದರು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕುಡೆಕಲ್ ಸಂತೋಷ್ ವಂದಿಸಿದರು.