ಮಡಿಕೇರಿ, ಜ. 22: ದೇಚೂರು ಕೊಡವಕೇರಿ ಸಂಘದ ಪುತ್ತರಿ ಊರೊರ್ಮೆ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು. ಕೇರಿಯ ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಮಾತನಾಡಿ, ಇತ್ತೀಚೆಗೆ ನಿಧನರಾದ ಕೇರಿ ಅಧ್ಯಕ್ಷ ಕೂಪದೀರ ಮಿಟ್ಟು ಮಾಚಯ್ಯ ಅವರ ಪರೋಪಕಾರ ಗುಣವನ್ನು ಸ್ಮರಿಸಿದರು. ಸ್ಥಳೀಯ ಯುವ ಜನಾಂಗ ಸರ್ಕಾರಿ ಹುದ್ದೆಗಳನ್ನು, ಉನ್ನತ ಸ್ಥಾನವನ್ನು ಅಲಂಕರಿಸಬೇಕು. ಜನಾಂಗದ ಒಗ್ಗಟ್ಟಿಗಾಗಿ ಪ್ರತಿಯೊಬ್ಬರು ದುಡಿಯುವಂತೆ ಕರೆ ನೀಡಿದರು. ಕೇರಿಯ ಸಂಘದ ಅಧ್ಯಕ್ಷ ಮಾದೇಯಂಡ ರವಿ ಕುಂಞಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರೆಲ್ಲರ ಸಹಕಾರದಿಂದ ಕೇರಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ.
ಇದೇ ಸಂದರ್ಭ ಅತೀ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಕೇರಿಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕುಂಞÉೀರ ಚೋಮುಣಿ ಸೋಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾರ್ಷಿಕ ವರದಿಯನ್ನು ಮೇವಡ ನಾಣಯ್ಯ ಮಂಡಿಸಿದರು. ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು.