ಸಿದ್ದಾಪುರ, ನ. 11: ಚೆಟ್ಟಳ್ಳಿ, ಮೊದೂರು ಹಾಗೂ ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ ಭಾಗದಲ್ಲಿ ಹಲವು ಕಾರ್ಮಿಕರು ಸೇರಿದಂತೆ ರೈತರ ಮೇಲೆ ಧಾಳಿ ನಡೆಸಿ ಪ್ರಾಣ ಹಾನಿ, ಕೃಷಿ ಫಸಲು ನಷ್ಟ ಮಾಡಿರುವ 4 ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ದೊರಕಿದ್ದು, ಸಿದ್ದಾಪುರ ಸಮೀಪದ ಒಂಟಿಯಂಗಡಿ ಬಳಿ ಕುಶಾಲನಗರ ಹಾಗೂ ವೀರಾಜಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಾಕಾನೆಗಳೊಂದಿಗೆ ಕಾರ್ಯಚರಣೆಗೆ ಸಿದ್ಧತೆ ಮಾಡಿಕೊಂಡಿದೆ.

ಪತ್ರ್ರಿಕೆಯೊಂದಿಗೆ ಕುಶಾಲನಗರ ವಲಯ ಅರಣ್ಯಧಿಕಾರಿ, ಕೋಚೆರ ನೆಹರು ಮಾತನಾಡಿ, ಬೆಂಗಳೂರು ಅಪಾರ ಪ್ರಧಾನ ಅರಣ್ಯಾಧಿಕಾರಿ ಪುನಾತಿಶ್ರೀಧರ್ ತಾ. 12 ರಂದು (ಇಂದು) ಬೆಳಿಗ್ಗೆ 6 ಗಂಟೆಗೆ ಕಾಡಾನೆ ಸೆರೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡಲಿರುವರು.