ಚೆಟ್ಟಳ್ಳಿ ನ. 14: ಹಲವು ತಿಂಗಳಿಂದ ರಾಜಾರೋಷವಾಗಿ ಪುಂಡಾಟಿಕೆ ಮೆರೆಯುತ್ತಿದ್ದ ಆನೆಯೊಂದನ್ನು ಅರಣ್ಯ ಸಿಬ್ಬಂದಿ ಗಳು ಸೆರೆ ಹಿಡಿದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ತಾ. 12ರ ರಾತ್ರಿಯಿಂದಲೇ ಅರಣ್ಯ ಅಧಿಕಾರಿಗಳ ತಂಡ, ದುಬಾರೆ ಆನೆ ಶಿಬಿರದ ಮಾವುತರು, ಆರ್.ಸಿ.ಬಿ ತಂಡ ಚೆಟ್ಟಳ್ಳಿ ವ್ಯಾಪ್ತಿಯ ಪುಂಡಾನೆಯ ಸೆರೆಗೆ ಕಾರ್ಯಾಚರಣೆ ನಡೆಸಿ ಡಾ. ಉಮಾಶಂಕರ್ ಹಾಗೂ ವಲಯ ಅರಣ್ಯಾಧಿಕಾರಿ ಕೆ. ನೆಹರು ಅವರ ಮಾರ್ಗದರ್ಶನದಂತೆ ಮುಂಜಾನೆ 6.30ಕ್ಕೆ ಪುಂಡಾನೆಗೆ ಅರವಳಿಕೆಯ ಗುಂಡನ್ನು ಹಾರಿಸಲಾಯಿತು. ಸುಮಾರು 500 ಮೀ. ಅರಣ್ಯದೊಳಗೆ ತೆರಳಿದ ಆನೆ ಕೆಳಕ್ಕೆ ಬೀಳಲ್ಪಟ್ಟಿತು. ನಂತರ ದುಬಾರೆ ಆನೆ ಶಿಬಿರದಲ್ಲಿನ ಸಾಕಾನೆ ಗಳಾದ ಅಭಿಮನ್ಯು, ಹರ್ಷ, ಗಜೇಂದ್ರ, ಕೃಷ್ಣ ಸೇರಿ 6 ಆನೆಗಳು ಪುಂಡಾನೆಯನ್ನು ಸುತ್ತುವರಿದು, ಅರಣ್ಯದ ಬದಿಗೆ ಎಳೆತಂದು ಲಾರಿಗೆ ಏರಿಸಲಾಯಿತು ಚೆಟ್ಟಳ್ಳಿ, ಸಿದ್ದಾಪುರ ಮಾರ್ಗವಾಗಿ ದುಬಾರೆಯ ಆನೆ ಶಿಬಿರಕ್ಕೆ ತರಲಾಯಿತು. ವೈದ್ಯಕೀಯ ಪರೀಕ್ಷೆಗಳಾದ ನಂತರ ಸ್ಕ್ರಾಲ್‍ನೊಳಕ್ಕೆ ಹಾಕಿ ಬಂಧಿಸಲಾಯಿತು. ಕಾರ್ಯಚರಣೆಯಲ್ಲಿ ಮಡಿಕೇರಿ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಎಂ. ಎಂ. ಜಯ, ಏಡುಕುಂಡಲು, ವೀರಾಜಪೇಟೆ ಅರಣ್ಯ ಸಂರಕ್ಷಣಾಧಿ ಕಾರಿಗಳು, ಸಹಾಯಕ ಅರಣ್ಯಾಧಿಕಾರಿ. ಎಂ. ಎಸ್, ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿಗಳಾದ ಕೊಚ್ಚೆರ ನೆಹರು, ಗೋಪಾಲ, ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಬಾನಚಿಡ ದೇವಿಪ್ರಸಾದ್, ಡಾ.ಉಮಾಶಂಕರ್, ಅರಣ್ಯ ರಕ್ಷಕರು, ಆರ್. ಆರ್. ಟಿ. ಮಡಿಕೇರಿ ಗ್ರಾಮಾಂತರ ಎಸ್. ಐ. ಸಾರ್ವಜನಿಕರನ್ನು ನಿಯಂತ್ರಿಸಲು ಡಿಆರ್ ತುಕಡಿಯನ್ನು ನೇಮಿಸಿ ದ್ದರು. ನುರಿತ ಆನೆ ಮಾವುತರು ಹಾಗೂ ಕಾವಾಡಿಗಳು ಇದ್ದರು.
-ಪುತ್ತರಿರ ಕರುಣ್‍ಕಾಳಯ್ಯ, ಲೂಹಿಸ್
ಚೆಟ್ಟಳ್ಳಿ