ಮಡಿಕೇರಿ, ಜು. 16: ಮಡಿಕೇರಿಯ ಶಾಲಾ-ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾನ್ವೆಂಟ್ ಜಂಕ್ಷನ್ ನಿವಾಸಿಗಳು ಆಗ್ರಹಿಸಿದ್ದಾರೆ.

ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಹಾಗೂ ಕಾನ್ವೆಂಟ್ ಶಾಲೆ ತೆರೆಯುವ ಹಾಗೂ ಬಿಡುವ ಸಂದರ್ಭದಲ್ಲಿ ಕೆಲವು ಯುವಕರು ಬೈಕ್ ಹಾಗೂ ಕಾರುಗಳಲ್ಲಿ ವೇಗವಾಗಿ ಚಲಿಸುತ್ತಾ ವಿದ್ಯಾರ್ಥಿನಿಯರನ್ನು ಚುಡಾಯಿಸುವದಲ್ಲದೆ, ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಗದ್ದುಗೆ ಬಳಿ ಗುಂಪು ಸೇರಿಕೊಂಡು ಪ್ರವಾಸಿಗರಿಗೂ ತೊಂದರೆ ಕೊಡುತ್ತಾರೆ. ಸಣ್ಣ ಪುಟ್ಟ ಮಕ್ಕಳು ರಸ್ತೆಯಲ್ಲಿ ಓಡಾಡುವ ಸಂದರ್ಭ ಅಪಾಯ ಉಂಟಾಗುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಶಾಲೆ ತೆರಯುವ ಹಾಗೂ ಬಿಡುವ ಸಂದರ್ಭದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಪುಂಡರ ಹಾವಳಿಯನ್ನು ತಡೆಗಟ್ಟಬೇಕಾಗಿ ಕೋರಿದ್ದಾರೆ. ಈ ಬಗ್ಗೆ ಹಲವು ಬಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವದೇ ಕಮ್ರ ಆಗಿರುವದಿಲ್ಲ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.