ಗೋಣಿಕೊಪ್ಪಲು, ಸೆ. 14: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ವಾರ್ಷಿಕ 120ಕೋಟಿ ವಹಿವಾಟು ನಡೆಸುವದರೊಂದಿಗೆ 1 ಕೋಟಿ 22 ಲಕ್ಷ. 13 ಸಾವಿರ ಲಾಭಾಂಶದಲ್ಲಿ ಬ್ಯಾಂಕ್ ಮುನ್ನಡೆಯುತ್ತಿದ್ದು ರಾಷ್ಟ್ರೀಯ ಬ್ಯಾಂಕ್‍ಗಳಿಗೆ ಏನೂ ಕಡಿಮೆ ಇಲ್ಲದಂತೆ ಬ್ಯಾಂಕ್ ತನ್ನ ವಹಿವಾಟನ್ನು ನಡೆಸುತ್ತಿದೆ. ಉತ್ತಮ ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭಾಂಶ ಪಡೆಯುತ್ತಿದ್ದು, ಬ್ಯಾಂಕಿನಲ್ಲಿರುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಅವಿರತ ಶ್ರಮದಿಂದ ಇಂತಹ ಸಾಧನೆ ಮಾಡಲು ಸಹಕಾರವಾಗಿದೆ ಈ ಬಾರಿ ಸಂಸ್ಥೆಯ ವಹಿವಾಟಿಗೆ ರಾಜ್ಯ ಅಪೆಕ್ಸ್ ಬ್ಯಾಂಕ್‍ನಿಂದ ಪ್ರಶಸ್ತಿ ಲಭ್ಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮೂಕೋಂಡ ವಿಜುಸುಬ್ರಹ್ಮಣಿ ತಿಳಿಸಿದರು. ಬ್ಯಾಂಕಿನ ಆವರಣದಲ್ಲಿ ಮಾಧÀ್ಯಮದೊಂದಿದೆ ಮಾತನಾಡಿ, ಆಡಳಿತ ಮಂಡಳಿಯು ಬ್ಯಾಂಕಿನ ವಹಿವಾಟಿನ ಸಮಗ್ರ ವರದಿಯ ಸಾರಾಂಶವನ್ನು ಹಂಚಿಕೊಂಡರು.

ಸಂಘವು 1921ರಲ್ಲಿ ಉದಯ ಗೊಂಡು 1976ರಲ್ಲಿ ಹೊಸೂರು-ಬೆಟ್ಟಗೇರಿ ವ್ಯವಸಾಯ ಸೇವಾ ಸಹಕಾರ ಸಂಘವನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡು ಪ್ರಸ್ತುತ ಮೇಕೂರು, ಹೊಸ್ಕೇರಿ, ಚೆನ್ನಯ್ಯನ ಕೋಟೆ, ಚೆನ್ನಂಗಿ, ಹೊಸೂರು-ಬೆಟ್ಟಗೇರಿ ಗ್ರಾಮಗಳಲ್ಲಿ ಕಾರ್ಯಕ್ಷೇತ್ರವನ್ನು ಹೊಂದಿದೆÀ, ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ಕರ್ನಾಟಕದ ಸಹಕಾರ ಸಂಘಗಳಲ್ಲಿ ಪ್ರಥಮವಾಗಿ ಏಷಿಯನ್ ಪೇಯಿಂಟ್‍ರವರ ಬಣ್ಣ ಸಂಯೋಜನಾ ಘಟಕವನ್ನು ಆರಂಭಿಸಿದೆ, ಬ್ಯಾಂಕಿನಲ್ಲಿ ಸ್ಟ್ಯಾಂಪ್ ಪೇಪರ್, ಜೆರಾಕ್ಸ್ ಯಂತ್ರ ಅಳವಡಿಸಿದ್ದು ಈ ಬಾರಿ ಬ್ಯಾಂಕ್‍ನ ಸದಸ್ಯರಿಗೆ ಲಾಭಾಂಶದಲ್ಲಿ ಹೆಚ್ಚಿನ ಡಿವಿಡೆಂಡ್ ನೀಡಲು ತೀರ್ಮಾನಿಸಿದೆ,

ಅಲ್ಲದೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವರ್ಷಂಪ್ರತಿ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಾ ಬಂದಿರುವ ಬ್ಯಾಂಕ್ ಸಿಬ್ಬಂದಿಗಳ ಕೊಠಡಿ ಹಾಗೂ 600 ಮೆಟ್ರಿಕ್ ಟನ್ ಸೌಲಭ್ಯದ ಗೋದಾಮನ್ನು ನಿರ್ಮಿಸಿ ಅನುಕೂಲ ಕಲ್ಪಿಸಿದೆ. ಮುಂದೆ ರೈತರ ಅನುಕೂಲ ಕ್ಕಾಗಿ ಕೋವಿ, ಮದ್ದುಗುಂಡುಗಳನ್ನು ಸಂಸ್ಥೆಯಿಂದ ವಿತರಿಸುವ ಆಶಾಭಾವನೆಯನ್ನು ಅಧ್ಯಕ್ಷರಾದ ವಿಜು ಸುಬ್ರಮಣಿ ವ್ಯಕ್ತಪಡಿಸಿದರು.

ಸಂಘದಲ್ಲಿ 1066 ಸದಸ್ಯರಿದ್ದು, ಸದಸ್ಯರ ಪಾಲು ಬಂಡವಾಳ 99.69 ಲಕ್ಷಗಳಿವೆ. ಠೇವಣಾತಿ 2028.44 ಲಕ್ಷ ಸಂಗ್ರಹಿಸಲಾಗಿದೆ.

ಕೃಷಿಯೇತರ ಸಾಲವನ್ನು ಬ್ಯಾಂಕ್ ನೀಡುತ್ತಿದ್ದು, ಗೊಬ್ಬರ ಸಾಲ 59.05.ಲಕ್ಷ, ಕಾಫಿ ಹಾಗೂ ಕರಿಮೆಣಸು ಈಡಿನ ಸಾಲ 245.79 ಲಕ್ಷ ನೀಡಲಾಗಿದೆ. ಆಭರಣ ಸಾಲ 796.52 ಲಕ್ಷ, ನಗದು ಪತ್ತಿನ ಸಾಲ ಠೇವಣಿ ಆಧಾರದ ಮೇಲೆ 543.73 ಲಕ್ಷ, ಸಾಲ ನೀಡಿದ್ದು ಮರುಪಾವತಿ ಯಲ್ಲೂ ಶೇ.99 ಸಾಧನೆ ಮಾಡಿದೆ. ಎಂಬದಾಗಿ ಅಧ್ಯಕ್ಷ ವಿಜುಸುಬ್ರಹ್ಮಣಿ ಉಪಾಧ್ಯಕ್ಷ ಎಂ.ಎಂ. ಅಪ್ಪಚ್ಚು (ಸದಾ), ತಿಳಿಸಿದರು. ನಿರ್ದೇಶಕರಾದ ಕೆ.ಕೆ.ಸುಬ್ರಮಣಿ (ತಮ್ಮಿ), ಶ್ಯಾಮ್‍ಚಂದ್ರ, ವಿ.ವಿ.ಡಾಲು, ಕೆ.ಜಿ. ಧರ್ಮಜ, ಜೆ.ಕೆ. ಶುಭಾಷಿಣಿ, ಹೆಚ್.ಟಿ. ದಿನೇಶ್, ಎಂ.ಎಂ. ಕಾಳಪ್ಪ, ಕೆ.ಜಿ. ಬೋಜಮ್ಮ, ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಪಿ.ಸಿ.ಕೃಷ್ಣ, ಮೇಲ್ವೀಚಾರಕ ಟಿ.ಟಿ.ಗಣಪತಿ ಮಾಹಿತಿ ಒದಗಿಸಿದರು.

7ನೇ ಬಾರಿಗೆ ರಾಜ್ಯ ಪ್ರಶಸ್ತಿ

ಗ್ರಾಮೀಣ ಭಾಗದ ಸಹಕಾರ ಬ್ಯಾಂಕ್‍ಗಳಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ 7ನೇ ಬಾರಿಗೆ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ತಾ. 15ರಂದು (ಇಂದು) ಮಡಿಕೇರಿ ಕೊಡವ ಸಮಾಜದಲ್ಲಿ ಜರುಗುವ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

-ವರದಿ: ಟಿ.ಎಲ್. ಶ್ರೀನಿವಾಸ್.