ಗೋಣಿಕೊಪ್ಪಲು, ಜ. 22 : ಪಾಲಂದೀರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಲೀಗ್ನ್ನು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ದಾನಿ ಪಾಲಂದೀರ ಪಾರ್ವತಿ ಅಪ್ಪಯ್ಯ ಉದ್ಘಾಟಿಸಿದರು.
ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಲೀಗ್ಗೆ ವಿಶೇಷ ಮೆರಗು ನೀಡಲಾಯಿತು. ವಿಭಿನ್ನವಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದರು. ಅಪ್ಪಯ್ಯ ಅವರ ಪತ್ನಿ ಪಾಲಂದೀರ ಪಾರ್ವತಿ ಅಪ್ಪಯ್ಯ ಟ್ರೋಫಿ ಅನಾವರಣಗೊಳಿಸಿದರು. ಎಂಟು ತಂಡಗಳ ಆಟಗಾರರು ತಮ್ಮ ಜೆರ್ಸಿ ತೊಟ್ಟು ಮೈದಾನದಲ್ಲಿ ಪಾಲ್ಗೊಂಡರು.
ಕೋರಲ್ ವಾಟರ್ಸ್ ತಂಡ ಎಲ್ಲಾ ಆಟಗಾರರಿಗೆ ನೀಡಿದ್ದ ರಂಗು ರಂಗಿನ ಕೊಡೆಗಳನ್ನು ಆಟಗಾರರು ತೆರೆಯುವ ಮೂಲಕ ಮೈದಾನದಲ್ಲಿ ವಿಶೇಷ ಮೆರಗು ನೀಡಿದರು. ಅಪ್ಪಚ್ಚಕವಿ ವಿದ್ಯಾಲಯದ ಮಕ್ಕಳ ಕೋಲಾಟ, ನೃತ್ಯ, ಸೆಂಟ್ ಆನಿಸ್ ವಿದ್ಯಾರ್ಥಿಗಳ ಕೊಡಗ್ರ ವೀರ ನೃತ್ಯ ಗಮನ ಸೆಳೆಯಿತು. ತೋರ ತಂಡದ ಉರ್ಟಿಕೊಟ್ಟ್ ಆಟ್ ಮೂಡಿ ಬಂತು.
ಭರಣಿ ತಂಡದ ಮಾಲೀಕÀ ಮತ್ರಂಡ ಬೋಪಣ್ಣ, ಟೀಮ್ ಬುಟ್ಟಿಯಂಡ ತಂಡದ ಬುಟ್ಟಿಯಂಡ ಬೋಪಣ್ಣ, ಕೋರಲ್ ವಾಟರ್ಸ್ನ ಕೋಳೇರ ರಾಖಿ ಕಾರ್ಯಪ್ಪ, ಪಾಡೆಯಂಡ ದೀಪಕ್ ಹಾಗೂ ಗುಮ್ಮಟ್ಟೀರ ಮುತ್ತಣ್ಣ, ಹಾಕಿ ಅಮ್ಮತ್ತಿ ತಂಡದ ಮಂಡೇಪಂಡ ಸುಷ್ಮಾ, ಅದಿತಿ ಟ್ಯಾಂಜರಿಯನ್ನ ಶುಭ್ಕರ್ ರಾವ್ ಪಾಲ್ಗೊಂಡರು.
ಅತಿಥಿಗಳಾಗಿ ಹಾಕಿ ಪ್ರೇಮಿ ಮೊಳ್ಳೇರ ಸುಬ್ಬಯ್ಯ, ನಿವೃತ್ತ ಎಸ್ಪಿ ಮುಕ್ಕಾಟೀರ ಚೋಟು ಅಪ್ಪಯ್ಯ, ನಟ ಕಳ್ಳಿಚಂಡ ನಿಶಾನ್ ನಾಣಯ್ಯ ಉಪಸ್ಥಿತರಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಚೆಪ್ಪುಡೀರ ಕಾರ್ಯಪ್ಪ, ರೋಹನ್ ನಿರೂಪಿಸಿದರು.
ಮೊದಲ ಪಂದ್ಯದಲ್ಲಿ ನಾಲ್ನಾಡ್ ತಂಡವು ಪಿಂಕ್ ಫ್ಲೆಮಿಂಗೋಸ್ ತಂಡವನ್ನು 7-1 ಗೋಲುಗಳಿಂದ ಸೋಲಿಸುವ ಮೂಲಕ ಗೆಲುವಿನ ಆರಂಭ ಪಡೆದರು. ನಾಲ್ನಾಡ್ ಪರ 4,9,44 ನೇ ನಿಮಿಷಗ¼ಲ್ಲಿ ಕಾವೇರಮ್ಮ, 34, 42, 46 ನೇ ನಿಮಿಷಗಳಲ್ಲಿ ನಿಹಾ, 48 ನೇ ನಿಮಿಷದಲ್ಲಿ ರುಕ್ಮಿಣಿ, ಪಿಂಕ್ ಪರ 6 ನೇ ನಿಮಿಷದಲ್ಲಿ ಭೂಮಿಕ 1 ಗೋಲು ಹೊಡೆದರು. ಭರಣಿ ಇಲೆವೆನ್ ಹಾಗೂ ಟೀಮ್ ಬುಟ್ಟಿಯಂಡ ತಂಡಗಳು ಸಮಬಲದ ಹೋರಾಟ ನಡೆಸುವ ಮೂಲಕ ಪಂದ್ಯ ಡ್ರಾ ಫಲಿತಾಂಶ ನೀಡಿತು. ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ.
ಭಗವತಿ ಸ್ಪೋಟ್ರ್ಸ್ ಕ್ಲಬ್ ತಂಡವು ಕೋರಲ್ ವಾಟರ್ಸ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿತು. ಭಗವತಿ ಪರ 25 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನ್ನು ನಿಶಾ ಗೋಲಾಗಿ ಪರಿವರ್ತಿಸಿದರು. 32 ನಿಮಿಷದಲ್ಲಿ ಕೃತಿಕ ಒಂದು ಗೋಲು ಹೊಡೆದರು. ಅದಿತಿ ಟ್ಯಾಂಜರಿನೆಸ್ ತಂಡವು ಹಾಕಿ ಅಮ್ಮತ್ತಿ ವಿರುದ್ದ 2-0 ಗೋಲುಗಳ ಜಯ ಸಾಧಿಸಿತು. ಅದಿತಿ ಪರ 30 ನೇ ನಿಮಿಷದಲ್ಲಿ ರಶ್ಮಿ, 43 ನೇ ನಿಮಿಷದಲ್ಲಿ ನೀತು ಗೋಲು ಹೊಡೆದರು. ಪಂದ್ಯಾವಳಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ತೀರ್ಪುಗಾರರಾಗಿ ಕುಪ್ಪಂಡ ದಿಲನ್,