ನಾಪೆÇೀಕ್ಲು, ಜ. 23: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ ಕಾಂಕ್ರೀಟ್‍ಗೆ 3.50 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಮುಂದಿನ ವಾರದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗುವದು ಎಂದು ಬೆಂಗಳೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಕೈಕಾಡು ಗ್ರಾಮದ ಕದ್ದಣಿಯಂಡ (ಮೊದಲ ಪುಟದಿಂದ) ದುರಸ್ತಿಗೆ ವಿಶೇಷ ಪ್ಯಾಕೇಜ್‍ಗೆ ಶ್ರಮಿಸಲಾಗುವದು ಎಂದು ಭರವಸೆ ನೀಡಿದರು.ನೆಲ, ಜಲ, ಜಾತಿ ಸಮಸ್ಯೆಗೆ ಎಲ್ಲರೂ ಒಂದಾಗಬೇಕು. ಕೊಡವರ ಅಸ್ತಿತ್ವಕ್ಕೆ ಧÀಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ವಿದ್ಯಾಭ್ಯಾಸದ ನಂತರ ಯುವಕರು ನೌಕರಿಗಾಗಿ ನಗರದ ಕಡೆಗೆ ಹೋಗುವ ಬದಲು ಜಿಲ್ಲೆಯಲ್ಲಿಯೇ ಉದ್ಯಮ ಆರಂಭಿಸುವಂತೆ ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

ಶೆಟಲ್ ಬ್ಯಾಟ್ ಕ್ರೀಡಾಂಗಣವನ್ನು ರಾಷ್ಟ್ರೀಯ ಆಟಗಾರರಾದ ಮಾಳೆಯಂಡ ಅಶೋಕ್ ಪೂವಯ್ಯ ಮತ್ತು ಅರುಣ್ ಪೂವಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಸಹೋದರರು ಛಲದಿಂದ ಮಾತ್ರ ಸಾಧನೆ ಸಾಧ್ಯ. ಕಷ್ಟಪಟ್ಟರೆ ಮುಂದೆ ಸುಖವಿದೆ, ಫಲವಿದೆ ಎಂಬದನ್ನು ಅರಿಯಬೇಕು. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪೆÇೀಷಕರು ಮಕ್ಕಳನ್ನು ಪೆÇ್ರೀತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿದರು.

ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಕೊಡವ ಸಮಾಜದ ಹಾಗೂ ಸಾಂಸ್ಕøತಿಕ ಕೂಟದ ಕಾರ್ಯದರ್ಶಿ ಮಂಡೀರ ರಾಜಪ್ಪ ಚಂಗಪ್ಪ, ಸಾಂಸ್ಕøತಿಕ ಕೂಟದ ಖಜಾಂಚಿ ಕಲಿಯಂಡ ಹ್ಯಾರಿ ಮಂದಣ್ಣ, ಕೊಡವ ಸಮಾಜದ ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ ಇದ್ದರು.

ಮಣವಟ್ಟಿರ ದಯಾ ಕುಟ್ಟಪ್ಪ ಪ್ರಾರ್ಥಿಸಿ, ಕ್ರೀಡಾ ಸಾಂಸ್ಕøತಿಕ ಹಾಗೂ ಮನರಂಜನಾ ಕೂಟದ ಅಧ್ಯಕ್ಷ ಕಾಂಡಂಡ ಜೋಯಪ್ಪ ಸ್ವಾಗತಿಸಿ, ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ವಂದಿಸಿದರು.