ವೀರಾಜಪೇಟೆ, ಜು. 26: ತಾಲೂಕು ಕೇಂದ್ರವಾದ ವೀರಾಜಪೇಟೆಯಲ್ಲಿ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದಿರುವದರಿಂದ ಕೆಲವು ಖಾಸಗಿ ಬಸ್‍ಗಳು, ಮ್ಯಾಕ್ಸಿ ಕ್ಯಾಬ್‍ಗಳು, ಟ್ಯಾಕ್ಸಿಗಳು ಪ್ರಯಾಣಿಕರಿಗೆ ಸಂಸ್ಥೆಯ ಬಸ್‍ಗಳ ಬದಲಾಗಿ ಮೈಸೂರಿಗೆ ಸಂಚಾರವನ್ನು ಆರಂಭಿಸಿದವು.ಎರಡನೇ ದಿನವೂ ಸಂಸ್ಥೆಯ ವೀರಾಜಪೇಟೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದರೂ ಖಾಸಗಿ ಬಸ್‍ಗಳು, ಮ್ಯಾಕ್ಸಿಕ್ಯಾಬ್‍ಗಳು, ಟ್ಯಾಕ್ಸಿಗಳು ಪರ್ಯಾಯ ವ್ಯವಸ್ಥೆಯಲ್ಲಿದ್ದುದರಿಂದ ಪ್ರಯಾಣಿಕರಿಗೆ ಅನುಕೂಲವಾದಂತಿತ್ತು.ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ನಿಯಂತ್ರಣ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಕಚೇರಿಯಲ್ಲಿ ವಿಚಾರಣೆಗೆ ಬಂದ ಪ್ರಯಾಣಿಕರಿಗೆ ನಿಯಂತ್ರಣಾಧಿಕಾರಿ ಖಾಸಗಿ ಬಸ್, ಟ್ಯಾಕ್ಸಿ ಕ್ಯಾಬ್‍ಗಳತ್ತ ತೋರಿಸುತ್ತಿದ್ದರು.

ಖಾಸಗಿ ಬಸ್‍ನಲ್ಲಿ ಮೈಸೂರಿಗೆ ಪ್ರತಿ ಸೀಟಿಗೆ ರೂ. 150, ಮ್ಯಾಕ್ಸಿ ಕ್ಯಾಬ್‍ಗೆ ರೂ. 180 ಹಾಗೂ ಟ್ಯಾಕ್ಷಿಗಳಿಗೆ ರೂ. 300ರಂತೆ