ಭಾಗಮಂಡಲ, ಸೆ. 14: ಭಾಗಮಂಡಲದಲ್ಲಿ ಬೆಂಗಳೂರಿನ ಪ್ರಕೃತಿ ಫೌಂಡೇಶನ್ ವತಿಯಿಂದ ರಾಜ್ಯದಲ್ಲಿ ಮಳೆಗಾಗಿ ತಾ. 11 ರಿಂದ ನಡೆಯುತ್ತಿರುವ ಪರ್ಜನ್ಯ ವೃಷ್ಟಿ ಯಜ್ಞ ನಿರ್ವಹಣೆಗೆ ಇಂದು ತಾತ್ಕಾಲಿಕ ವಿಘ್ನ ತಲೆದೋರಿತು. ಭಾಗಮಂಡಲದ ಸ್ಥಳೀಯ ಈರ್ವರು ಯುವಕರು ಯಜ್ಞವನ್ನು ಸ್ಥಗಿತ ಗೊಳಿಸುವಂತೆ ತಾಕೀತು ಮಾಡಿದರು. ಯಜ್ಞದಲ್ಲಿ ಭಾಗಿಯಾಗಿದ್ದ ಕೆಲವರು ಇದನ್ನು ವಿರೋಧಿಸಿದರು. ಮಾತಿಗೆ ಮಾತು ಬೆಳೆದಾಗ ಅನೇಕ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. “ನಮಗೆ ಭಾಗಮಂಡಲಕ್ಕೆ ಸಾಕಷ್ಟು ಮಳೆÉಯಾಗಿದೆ. ಕಳೆದ ವರ್ಷಾಂತ್ಯಕ್ಕೆ 210 ಇಂಚು ಮಳೆಯಾಗಿದ್ದರೆ, ಈ ವರ್ಷ ಈಗಾಗಲೇ 170 ಇಂಚು ಮಳೆÉಯಾಗಿದ್ದು, ಇನ್ನೂ ಮಳೆಯಾಗುತ್ತದೆ. ಇಲ್ಲಿ ಹೆಚ್ಚು ಮಳೆಯಾದರೆ, ನಮ್ಮ ಬೆಳೆ ಕೊಚ್ಚಿ ಹೋಗಿ ನಷ್ಟವಾಗುತ್ತದೆ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಯಜ್ಞ ಮಾಡಿ” ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಅನಿವಾರ್ಯವಾಗಿ ಯಜ್ಞಕ್ಕೆ ಕುಳಿತ ಪುರೋಹಿತರು ಯಜ್ಞ ನಿಲ್ಲಿಸಿ ಸ್ಥಳದಿಂದ ತೆರಳಿದರು. ಇದರಿಂದ

(ಮೊದಲ ಪುಟದಿಂದ) ನೊಂದ ಯಜ್ಞಕ್ಕೆ ಕುಳಿತಿದ್ದ ಸ್ಥಳೀಯರೇ ಆದ ಸೋಮಶೇಖರ್ ನಾಯಕ್ ಮೊದಲಾದವರು ಭಾಗಮಂಡಲ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮಧ್ಯೆ ಪ್ರವೇಶ ಕೋರಿದರು. ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಾಗರಿಕರು, ಯಜ್ಞ ಸಂಘಟಕರೂ ಸೇರಿ ದೀರ್ಘ ಮಾತುಕತೆ ಬಳಿಕ ಈಗಾಗಲೇ ಯಜ್ಞ ಪ್ರಾರಂಭಗೊಂಡು ಗುರುವಾರ(ಇಂದು)À ಮುಕ್ತಾಯಗೊಳ್ಳಲಿರುವದರಿಂದ ಕ್ಷೇತ್ರದಲ್ಲಿ ಅಪಚಾರವಾಗುವದು ಬೇಡ ಎನ್ನುವ ಸೌಹಾರ್ದಯುತ ತೀರ್ಮಾನಕ್ಕೆ ಬಂದರು.

ಮುಂದೆ ಯಾರಾದರೂ ಇಂತಹ ಕಾರ್ಯಗಳನ್ನು ನಡೆಸಬೇಕಾದರೆ, ದೇವಾಲಯ ಆಡಳಿತದಿಂದ ಅನುಮತಿ ಪಡೆದು, ಸ್ಥಳೀಯರ ಗಮನಕ್ಕೂ ಬರುವಂತೆ ಪಾರದರ್ಶಕವಾಗಿ ನಿರ್ವಹಿಸಲಿ ಎಂದು ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟರು.

ಈ ಸಂದರ್ಭ ತಲಕಾವೇರಿಯ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್, ಭಾಗಮಂಡಲ ಗ್ರಾಮ ಪಂಚಾಯ್ತಿ ಸದಸ್ಯ ರಾಜಾರೈ, ಸ್ಥಳೀಯ ಪ್ರÀಮುಖರುಗಳಾದ ರಾಜೀವ್, ಅಮೆ ಪದ್ಮಯ್ಯ, ಕುಯ್ಯಮುಡಿ ಮನೋಜ್, ಸೂರ್ತಲೆ ಕಾಶಿ, ಕುಯ್ಯಮುಡಿ ಲವ ಮೊದಲಾದವರು ಹಾಜರಿದ್ದರು.

ಬಳಿಕ ನಾರಾಯಣಾಚಾರ್ ಅವರು ಯಜ್ಞವೇತ್ತಾರರಾದ ಪುರೋಹಿತರುಗಳನ್ನು ಸಂಪರ್ಕಿಸಿ ಪರ್ಜನ್ಯ ಯಜ್ಞವನ್ನು ಗುರುವಾರ ಮುಂದುವರಿಸುವಂತೆ ಮನ ವೊಲಿಸಿದರು. ವರದಿ: ಕೆ.ಡಿ. ಸುನಿಲ್