ಗೋಣಿಕೊಪ್ಪಲು, ನ. 5 : ಪರಿಸರ ಕಾಳಜಿ ಹೊತ್ತ ಮ್ಯಾರಥಾನ್ ಹಾಗೂ ಸಾಹಸ ಕ್ರೀಡೆಗಳು ತಾ. 6 ರಂದು ಕೆಕೆಆರ್ ನಲ್ಲಿ ನಡೆಯಲಿದೆ ಎಂದು ಕೂರ್ಗ್ ಎಕ್ಸ್ಪ್ರೆಸ್ಡಾಟ್ ಕಾಂನ ಸಂಚಾಲಕ ರಿಕ್ಕಿ ಮೊಣ್ಣಪ್ಪ ತಿಳಿಸಿದ್ದಾರೆ.
ಎಂಇಜಿ, ಏರ್ಫೋರ್ಸ್, ಸ್ಥಳೀಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.
5 ಕಿ.ಮೀ. ನೇಚರ್ ರನ್, 10 ಕಿ.ಮೀ., ಫಾರೆಸ್ಟ್ ರನ್, 21 ಕಿ.ಮೀ. ಫಾರೆಸ್ಟ್ ರನ್, 2 ಕಿ.ಮೀ. ರನ್ ಅಂಡ್ ರಾಫ್ಟ್, 21 ಕಿ.ಮೀ. ಎಮ್ಟಿಬಿ ಸೈಕ್ಲಿಂಗ್, 14 ಕಿ.ಮೀ. ಫಾರೆಸ್ಟ್ ಟ್ರೆಕ್ ಕ್ರೀಡೆಗಳು ನಡೆಯಲಿವೆ.
ಕ್ರೀಡೆಗಳು ಕೆಕೆಆರ್ ಜಂಕ್ಷನ್ನಿಂದ ಆರಂಭಗೊಂಡು ಕಡಮಕೊಲ್ಲಿ ರೆಸಾರ್ಟ್ನಲ್ಲಿ ಕೊನೆಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರವಾಸೋದÀ್ಯಮಕ್ಕೆ ಪ್ರೋತ್ಸಾಹ ಅಗತ್ಯವಿದೆ. ಅದರಂತೆ ಪರಿಸರ ರಕ್ಷಣೆಗೆ ಕೂಡ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ. ಇದೇ ಸಂದೇಶವನ್ನು ನಾವು ಇಂತಹ ಕ್ರೀಡೆಗಳ ಮೂಲಕ ಸಾರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯ ಪೊನ್ನಣ್ಣ ಉಪಸ್ಥಿತರಿದ್ದರು. ನೋಂದಣಿಗಾಗಿ 9632338111 ಸಂಪರ್ಕಿಸಬಹುದಾಗಿದೆ ಎಂದರು.