ನಾಪೆÉÇೀಕ್ಲು, ನ. 18: ಲೈಸ್ಸನ್ಸ್ ಹೊಂದದೆ ಇರುವ ಅಂಗಡಿ ಮಾಲೀಕರು ಮತ್ತು ವ್ಯಾಪರಸ್ಥರು 7 ದಿನಗಳ ಒಳಗಾಗಿ ಗ್ರಾಮ ಪಂಚಾಯಿತಿಗೆ ಬಂದು ಲೈಸನ್ಸ್ನ್ನು ನವೀಕರಿಸದಿದ್ದರೆ. ಅವರ ಅಂಗಡಿಯನ್ನು ಮುಟ್ಟುಗೋಲು ಹಾಕಲಾಗುವದೆಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಹೇಳಿದರು. ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರು ತೆರಿಗೆ ಪಾವತಿಸಲು ಹಳೆಯ ನೋಟುಗಳನ್ನು ತೆಗೆದು ಕೊಳ್ಳಲಾಗುವದು ಎಂದ ಅವರು ಗ್ರಾಮ ಪಂಚಾಯಿತಿಯಲ್ಲಿ ಲಕ್ಷದಷ್ಟು ಹಣವು ಕಂದಾಯ ರೂಪದಲ್ಲಿ ಬರಲು ಬಾಕಿ ಇದ್ದು ಗಡವಿನ ಓಳಗೆ ಇದನ್ನು ನೀಡುವಂತೆ ಅವರು ಹೇಳಿದರು. ಬದಲಾವಣೆಗೆ ಅವಕಾಶ ಇದೆ ಎಂದರು. ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯವನ್ನು ಕೂಡಲೆ ನಿರ್ಮಿಸಲಾಗುವದೆಂದು ಹೇಳಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡÀ ತಿಮ್ಮಯ್ಯ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಮುತ್ತುರಾಣಿ ಅಚ್ಚಪ್ಪ, ಕುಲ್ಲೇಟಿರ ಜ್ಯೋತಿ ನಾಚಪ್ಪ, ಟಿ.ಎ. ಮಹಮ್ಮದ್, ಮಹಮ್ಮದ್ ಖುರೇಶಿ, ಶಹನಾಜ್, ಅಮೀನಾ ಎಂ.ಎಂ., ಪುಲ್ಲೇರ ಪದ್ಮಿನಿ, ಕುಶು ಕುಶಾಲಪ್ಪ, ಬಿ.ಕೆ. ಸುಶೀಲ, ಟಿ.ಆರ್, ಮೋಹಿನಿ, ಬಿ.ಎಂ. ಶರೀನ, ಅಹಮ್ಮದ್ ಹಸೀನಾರ್, ಅಬ್ದುಲ್ ಅಜೀಜ್, ಪಿ.ಸಿ.ಅಕ್ಕಮ್ಮ, ಚೋಕಿರ ರೋಶನ್, ವನಜಾಕ್ಷಿ. ಪಿ.ಡಿ.ಓ. ಕೇಶವ ಮತ್ತಿತರಿದ್ದರು.