ಸೋಮವಾರಪೇಟೆ,ಅ.15: ಕೊಡಗು ಜಿಲ್ಲಾ ವೀರಶೈವ ಸಮಾಜದ ವತಿಯಿಂದ ತಾ. 18 ರಂದು ಕೊಡ್ಲಿಪೇಟೆಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ವೀರಶೈವ ಧಾರ್ಮಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಂಗವಾಗಿ ತಾ. 16 ರಂದು (ಇಂದು) ಕೊಡ್ಲಿಪೇಟೆಯ ಕಲ್ಲು ಮಠ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ನಡೆಯುವ ಕ್ರೀಡಾಕೂಟ ಉದ್ಘಾಟನೆಯನ್ನು ಕಲ್ಲುಮಠದ ಮಹಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ, ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಸೇರಿದಂತೆ ಇತರರು ಚಾಲನೆ ನೀಡಲಿದ್ದಾರೆ.

ವಿವಿಧ ವಯೋಮಾನದವರಿಗೆ ಕಪ್ಪೆ ಓಟ, ಒಂಟಿಕಾಲು ಓಟ, ಗೋಣಿಚೀಲ ಓಟ, ಮೂರುಕಾಲು ಓಟ, ವಿಷದ ಚೆಂಡು, ಬಸ್ ಹುಡುಕಾಟ, ಹಗ್ಗಜಗ್ಗಾಟ, ಬಲೂನು ಒಡೆಯುವದು, ನಿಂಬೆಹಣ್ಣು ಓಟ, ಮ್ಯೂಸಿಕಲ್ ಚೇರ್, ರಂಗೋಲಿ ಸ್ಪರ್ಧೆಗಳು ನಡೆಯಲಿವೆ ಎಂದು ಕ್ರೀಡಾ ಸಮಿತಿ ಸಂಚಾಲಕ ಎಸ್. ಮಹೇಶ್ ತಿಳಿಸಿದ್ದಾರೆ.ಆಯುಕ್ತರಾದ ಕೆ.ಬಿ. ಚಂದ್ರೇಗೌಡ ಉಪನ್ಯಾಸ ನೀಡಿ ಮಾತನಾಡಿ ಸರ್ಕಾರದ ಪ್ರತಿಯೊಂದು ಇಲಾಖೆಯ ಎಲ್ಲಾ ಚಟುವಟಿಕೆಗಳು ಪಾರದರ್ಶ ಕತೆಯಿಂದ ಕೂಡಿರಬೇಕೆನ್ನುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಜಾರಿಯಲ್ಲಿದೆಯಾದರೂ ಇದರ ಬಗ್ಗೆ ಜನರಲ್ಲಿ ಇನ್ನೂ ಕೂಡ ಜಾಗೃತಿ ಮೂಡಿಲ್ಲವೆಂದು ಅಭಿಪ್ರಾಯಪಟ್ಟರು.

ಪ್ರತಿಯೊಂದು ಕಛೇರಿಯಲ್ಲಿ ಕೈಪಿಡಿಗಳಿರುವದು ಕಡ್ಡಾಯವಾಗಿದೆ. ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿಯನ್ನು ಬಯಸಿದವರಿಗೆ ಸಕಾಲದಲ್ಲಿ ಮಾಹಿತಿ ಲಭ್ಯವಾಗದಿದ್ದಲ್ಲಿ ವಿಳಂಬ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಪ್ರಭಾವ ಬೀರಿ ತಪ್ಪಿನಿಂದ ತಪ್ಪಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದ ಅವರು ಇಂದಿನ ಆಧುನಿಕ ಯುಗದಲ್ಲಿ ಮಾಹಿತಿಯನ್ನು ಕಲೆ ಹಾಕುವದು ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕಾಗಿದೆ ಎಂದರು. ದೇಶದ ಹಿತದೃಷ್ಟಿ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಅನುಸರಿಸುವದು ಸೂಕ್ತವೆಂದ ಚಂದ್ರೇಗೌಡ, ಮಾಹಿತಿ ಹಕ್ಕು ಕಾಯ್ದೆ ಮತ್ತು ಮಾಧ್ಯಮಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು. ಭ್ರಷ್ಟಾಚಾರದ ವಿರುದ್ಧ ಜನ ಜಾಗೃತರಾಗಬೇಕೆಂದರು.

ಕಾರ್ಯಕ್ರಮವನ್ನು ಸುದ್ದಿ ವಾಚನದ ಮೂಲಕ ಉದ್ಘಾಟಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಇಂದು ಸಮಾಜದಲ್ಲಿ ಪ್ರಚಾರಕ್ಕಾಗಿ ಪತ್ರಿಕೋದ್ಯಮ ಸೃಷ್ಟಿಯಾಗುತ್ತಿದೆಯೆಂದು ವಿಷಾದ ವ್ಯಕ್ತಪಡಿಸಿದರು. ಜವಾಬ್ದಾರಿಯುತ ಲೇಖನಗಳು ಪ್ರಚುರಗೊಳ್ಳದೆ ಅಶ್ಲೀಲತೆ, ಕೊಲೆ, ಸುಲಿಗೆ, ಅಪರಾಧ ಪ್ರಕರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸಮಾಜವನ್ನು ತಿದ್ದುವ ಕೆಲಸಕ್ಕಾಗಿ ಯಾವದಕ್ಕೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆ ವಿಚಾರ ಮಂಥನ ಮಾಡಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿದ್ದು, ಇವುಗಳ ಪರಿಹಾರದ ನಿಟ್ಟಿನಲ್ಲಿ ಪತ್ರಿಕೆಗಳು ಕಾರ್ಯೋನ್ಮುಖ ವಾಗಬೇಕಾಗಿದೆ.

ಕೊಡಗು ಜಿಲ್ಲೆಯಲ್ಲಿ ಗಿರಿಜನರ ಸ್ಥಿತಿ ಗತಿ ಹೀನಾಯವಾಗಿದೆ. ಇವರ ಸಮಸ್ಯೆಗಳು ಪರಿಹಾರ ಆಗುವವರೆಗೆ ಹೋರಾಟದ ರೂಪದಲ್ಲಿ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಬೇಕೆಂದು ಸಲಹೆ ನೀಡಿದ ನಂಜುಂಡೇಗೌಡ, ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಹೋರಾಟಗಾರರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಇಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.

ಇದೇ ಸಂದರ್ಭ ಕೆ.ಎಂ. ಚಂದ್ರೇಗೌಡ ಅವರು ಮಾಹಿತಿ ಹಕ್ಕಿನ ಕುರಿತು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಕೆ.ಎಂ. ಚಂದ್ರೇಗೌಡ ಅವರÀನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವ ಪ್ರಯುಕ್ತ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ವಿಜೇತರಿಗೆ ಅತಿಥಿ ಗಣ್ಯರು ಬಹುಮಾನಗಳನ್ನು ವಿತರಿಸಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಹಂತೇಶ್, ಕೋಶಾಧಿಕಾರಿ ಎಂ.ಪಿ. ಕೇಶವ ಕಾಮತ್, ಟ್ರಸ್ಟಿಗಳಾದ ಟಿ.ಪಿ. ರಮೇಶ್, ಅನಿಲ್ ಹೆಚ್.ಟಿ., ಎಸ್.ಜಿ. ಉಮೇಶ್, ಶ್ರೀಧರ ಹÇವಲ್ಲಿ, ಮಧೋಷ್ ಪೂವಯ್ಯ, ವಿ.ಪಿ. ಸುರೇಶ್ ಉಪಸ್ಥಿತರಿದ್ದರು.