ಮಡಿಕೇರಿ, ಡಿ. 5: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಾ. 25ರಂದು ಕುಶಾಲನಗರದಲ್ಲಿ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಂದ್ಯಾವಳಿಯ ಆಯೋಜಕ ಕೆ.ಟಿ. ಶ್ರೀನಿವಾಸ್ ಅವರು ಜಿಲ್ಲೆಯ ವಿವಿಧೆಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಪಂದ್ಯಾವಳಿಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದೆಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಮಡಿಕೇರಿ ತಾಲೂಕಿನಿಂದ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಎರಡು ತಂಡ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರದ ಒಂದು ತಂಡ ಸೇರಿದಂತೆ ಒಟ್ಟು ಐದು ತಂಡಗಳು ಪಾಲ್ಗೊಳ್ಳಲಿವೆ. ರೌಂಡ್‍ರಾಬಿನ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು, ವಿಜೇತ ತಂಡಕ್ಕೆ ರೂ. 10 ಸಾವಿರ, ರನ್ನರ್ಸ್ ತಂಡಕ್ಕೆ ರೂ. 5 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ ರೂ. 3 ಸಾವಿರ ಬಹುಮಾನವಿದೆ. ಕುಶಾಲನಗರದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.

ಗೋಷ್ಠಿಯಲ್ಲಿ ಮಹಮದ್ ಮುಸ್ತಾಫ, ಶಿವರಾಜ್, ಹರೀಶ್‍ಗೌಡ ಹಾಜರಿದ್ದರು.