ಸೋಮವಾರಪೇಟೆ, ಜ. 2: ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಪಡಿಪೂಜೆ ಹಾಗೂ ಕರ್ಪೂರ ಜ್ಯೋತಿ ಪ್ರದಕ್ಷಿಣೆ ನಡೆಯಿತು.

ದೇವಾಲಯದ ಧರ್ಮಶಾಸ್ತನ ಗುಡಿಯಲ್ಲಿ ದೀಪಾರಾಧನೆ ನಡೆದು ಮಹಾಸಂಕಲ್ಪದೊಂದಿಗೆ ಹದಿನೆಂಟು ಮೆಟ್ಟಿಲಿಗೆ ಪಡಿಪೂಜೆಯನ್ನು ನೆರವೇರಿಸಲಾಯಿತು. ದೇವರಿಗೆ ಅತ್ತಾಯಪೂಜೆÉ, ಪುಷ್ಪಾಭಿಷೇಕ ನಡೆಯಿತು. ಕೊನೆಯಲ್ಲಿ ಬೃಹತ್ ಕರ್ಪೂರ ಜ್ಯೋತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆಯ ಮೂಲಕ ತರಲಾಯಿತು. ಪೂಜಾ ಕಾರ್ಯದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದು, ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಹಾಗೂ ಯಡವನಾಡು ಶಿವಬಸವೇಶ್ವರ ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪರವರುಗಳ ಪೌರೋಹಿತ್ಯದಲ್ಲಿ ನಡೆಯಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎನ್.ಡಿ. ವಿನೋದ್ ನಾಯರ್ ಹಾಗೂ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಹಾಗೂ ಪದಾಧಿಕಾರಿಗಳು ಪೂಜಾ ಕಾರ್ಯ ಅಚ್ಚುಕಟ್ಟಾಗಿ ನಡೆಸುವ ವ್ಯವಸ್ಥೆ ಕಲ್ಪಿಸಿದ್ದರು.