ನಾಪೆÇೀಕ್ಲು, ಜೂ. 18: ಸ್ಥಳೀಯ ಪಟ್ಟಣದ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ಸ್ವಚ್ಛಗೊಳಿಸದ ಹಿನ್ನೆಲೆ ಸಾರ್ವಜನಿಕರು ನಡೆದಾಡಲು ಸಾಧ್ಯವಾಗದೆ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೃಷಿಪತ್ತಿನ ಸಹಕಾರ ಸಂಘದ ಮೆಟ್ಟಿಲುಗಳ ಬಳಿ ಕೂಡ ತ್ಯಾಜ್ಯದ ರಾಶಿ ಕಂಡು ಬಂದಿದ್ದು, ಇದರ ಮೂಲಕವೇ ಬ್ಯಾಂಕ್ಗೆ ಗ್ರಾಹಕರು ಹೋಗಿ ಬರುವಂತಾಯಿತು. ಈ ತ್ಯಾಜ್ಯದಲ್ಲಿ ಜಾನುವಾರುಗಳು ಮತ್ತು ಬೀದಿ ನಾಯಿಗಳು ಆಹಾರ ಹುಡುಕುತ್ತಿದ್ದ ಕಾರಣ ಅವುಗಳು ಚೆಲ್ಲಾಪಿಲ್ಲಿಯಾಗಿ ದುರ್ನಾತ ಬೀರುತಿತ್ತು. ಪ್ರಧಾನಿ ನರೇಂದ್ರ ಮೋದಿಯ ಸ್ವಚ್ಛ ಭಾರತ್ಗೆ ಇದು ಸವಾಲು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬಂತು.
ಈ ಬಗ್ಗೆ ಪತ್ರಿಕೆಯು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅಭಿಪ್ರಾಯ ಬಯಸಿದಾಗ ಪೌರ ಕಾರ್ಮಿಕರ ಕೊರತೆಯಿಂದ ಈ ಸಮಸ್ಯೆ ತಲೆದೋರಿದೆ. ಇದ್ದ ಒಂದಿಬ್ಬರೂ ಕಾರ್ಮಿಕರೂ ಕೂಡ ನಾಪತ್ತೆಯಾಗಿದ್ದಾರೆ. ಕೂಡಲೇ ತ್ಯಾಜ್ಯದ ತೆರವಿಗೆ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.