ವೀರಾಜಪೇಟೆ, ಡಿ.18: ಮುಂದಿನ ಚುನಾವಣೆಯಲ್ಲಿ ಜನತಾ ದಳ ಪಕ್ಷದ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ಕಾರ್ಯಮಗ್ನರಾಗಬೇಕು. ಎಂದು ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕರೆ ನೀಡಿದರು.
ಬಾಳೆಲೆಯ ಪಕ್ಷದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಾಳೆಲೆ ವಿಭಾಗದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಸಂಕೇತ್ ಪೂವಯ್ಯ ಅವರು ಜಿಲ್ಲೆಯ ಮಾಜಿ ಸಚಿವ ಬಿ.ಎ.ಜೀವಿಜಯ ಅವರ ಮುಂದಾಳತ್ವ ದಲ್ಲಿ ಕೊಡಗಿನಲ್ಲಿ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿದೆ. ಎಲ್ಲಾ ಭಾಗಗಳಲ್ಲೂ ಪಕ್ಷದ ಬಗ್ಗೆ ಮತದಾರರು ಒಲವು ತೋರುತ್ತಿದ್ದಾರೆ ಎಂದÀು ಹೇಳಿದರು. ಗೆಲುವಿಗೆ ದಾಪುಗಾಲಿರಿಸಿದೆ. ಎಲ್ಲಾ ರೀತಿಯಲ್ಲಿಯೂ ಪಕ್ಷದ ಸಂಘಟನೆಯನ್ನು ಮುನ್ನಡೆಸಿ ಎಂದರು.
ಪಕ್ಷದ ಜಿಲ್ಲಾ ಮುಖಂಡರಾದ ಮಚ್ಚಾಮಾಡ ಮಾಚಯ್ಯ ಮಾತನಾಡಿ, ಜೆಡಿಎಸ್ ಸರಕಾರದ ಇಪ್ಪತ್ತು ತಿಂಗಳ ಅಧಿಕಾರದ ಅವಧಿಯಲ್ಲಿ ರೈತರು, ಬೆಳೆಗಾರರು ಬಳಸುವ ಪಂಪ್ ಸೆಟ್ಗಳಿಗೆ ವಿದ್ಯುತ್ ಶುಲ್ಕದಿಂದ ವಿನಾಯಿತಿ ಇತ್ತು. ಈಗಿನ ಸರಕಾರದಿಂದ ಈ ಶುಲ್ಕ ದುಬಾರಿಯಾಗಿದೆ. ಹೇರಳವಾಗಿ ಜಲ ಸಂಪತ್ತನ್ನು ಹೊಂದಿರುವ ಬಿ.ಶೆಟ್ಟಿಗೇರಿ, ಕೊಲ್ಲಿತೋಡುವಿನಿಂದ ಹುಣಸೂರಿನ ನದಿಗೆ ನೀರು ಹರಿಸುವ ಯೋಜನೆ ಸರಕಾರದ ಮುಂದಿದೆ. ಆದರೆ ಇದರಿಂದ ಕೊಡಗಿನ ರೈತರು ಬೆಳೆಗಾರರಿಗೆ ತೊಂದರೆ ಆದಲ್ಲಿ ಈ ಯೋಜನೆಯನ್ನು ಕಾರ್ಯಗತ ಗೊಳಿಸಲು ಜನತೆ ಬೆಂಬಲಿಸುವದಿಲ್ಲ.
ಪಕ್ಷದ ರಾಜ್ಯ ಸಮಿತಿಯ ಸದಸ್ಯ ವಿ.ಎಸ್.ಸುಬ್ರಮಣಿ ಮಾತನಾಡಿ, ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಕೊಡಗಿನಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿ ಮುನ್ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಬಲಿಷ್ಠ ಸಂಘನೆಯೊಂದಿಗೆ ಕಾರ್ಯಕರ್ತರು ಇಂದಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ಬಾಳೆಲೆ ವಿಭಾಗದ ಮುಖಂಡರು, ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರವನ್ನು ಜಿಲ್ಲಾ ಸಮಿತಿ ಗೌರವಿಸಲಿದೆ. ಕ್ಷೇತ್ರದ ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾರರ ಒಲವು ಗಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು. ಮಲ್ಚೀರ ಸಿ. ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧ್ಯಕ್ಷರ ಆಯ್ಕೆ
ಇದೇ ಸಭೆಯಲ್ಲಿ ಪಕ್ಷದ ಬಾಳೆಲೆ ವಿಭಾಗದ ನೂತನ ಅಧ್ಯಕ್ಷರಾಗಿ ಅಡ್ಡೇಂಗಡ ಐ. ಸುಬ್ಬಯ್ಯ ಅವರನ್ನು ಕಾರ್ಯಕರ್ತರು ಒಮ್ಮತದಿಂದ ಆಯ್ಕೆ ಮಾಡಿ ಮಾಜಿ ಅಧ್ಯಕ್ಷ ದೇವಯ್ಯ ಅವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಸಭೆಯನ್ನುದ್ದೇಶಿಸಿ ಕುಟ್ಟದ ಹಿರಿಯ ಮುಖಂಡ ತೀತೀರ ಮಂದಣ್ಣ, ನೂತನ ಅಧ್ಯಕ್ಷ ಸುಬ್ಬಯ್ಯ ವiತ್ತಿತರರು ಮಾತನಾಡಿದರು.
ಸಭೆಯಲ್ಲಿ ವಿಭಾಗದ ಮುಖಂಡರಾದ ಚೆಕ್ಕೇರ ಜೋಯಪ್ಪ, ಮಲ್ಲೇಂಗಡ ವಿನೀಶ್, ಚಿಮ್ಮಣಮಾಡ ಮೇದಪ್ಪ, ಗಾಡಂಗಡ ಸದು, ಆದೇಂಗಡ ಗೋಪಾಲ, ಮಾಪಂಗಡ ಮುದ್ದಯ್ಯ, ಚೀರಂಡ ರಾಜು, ಚಂಗಪ್ಪ, ಅಪ್ಪಣ್ಣ, ಚೌಡಯ್ಯ, ಮುಕ್ಕಾಟೀರ ಗಣೇಶ್, ಕಾಂಡೇರ ಅಶೋಕ್, ಪರಿಶಿಷ್ಟ ಪಂಗಡದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಗೋಪಾಲ್ ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆರ್.ರಘು, ಕುಟ್ಟ ವಿಭಾಗದ ಪಕ್ಷದ ಮುಖಂಡ ಪಿ.ವಿ.ರೆನ್ನಿ ಮೊದಲಾದವರು ಹಾಜರಿದ್ದರು.