ಅಮ್ಮತ್ತಿ, ಜೂ. 12: ಕಾರ್ಮಾಡು ಪಂಚಾಯಿತಿಗೆ sಸೇರಿದ ವಾಣಿಜ್ಯ ಮಳಿಗೆಗಳನ್ನು ಕಳೆದ ಹತ್ತು ವರ್ಷಗಳಿಂದ ಹರಾಜಿಗೆ ಹಾಕದೆ ಇರುವದರಿಂದ ಇದೀಗ ಹರಾಜು ಹಾಕಲು ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಿ ಮುಚ್ಚಲಾಗಿದೆ.

ಅಂಗಡಿ ಮುಂಗಟ್ಟುಗಳನ್ನು ಸ್ಥಳೀಯ ವರ್ತಕರುಗಳಿಗೆ ಬಾಡಿಗೆಗೆÉ ನೀಡಲಾಗಿದ್ದು, ಇದೀಗ ಪಂಚಾಯಿತಿ ಅದನ್ನು ವರ್ತಕರುಗಳಿಂದ ವಾಪಸ್ಸು ಪಡೆದಿದ್ದಾರೆ. ಕಳೆದ ಮೇ 13 ಕ್ಕೆ ಕೊನೆಯ ನೋಟಿಸ್ ಕಳುಹಿಸಿ, ಅಂಗಡಿ ಮುಂಗಟ್ಟುಗಳನ್ನು ಹರಾಜು ಹಾಕುವದಾಗಿ ತಿಳಿಸಲಾಗಿತ್ತು ಎಂದು ಪಂಚಾಯಿತಿಯವರು ಹೇಳಿದ್ದಾರೆ.

ಹರಾಜು ಪ್ರಕ್ರಿಯೆಯಿಂದಾಗಿ ಕೆಲ ವರ್ತಕರುಗಳಿಗೆ ಇದೀಗ ಸಮಸ್ಯೆ ಉಂಟಾಗಿದ್ದು, ಬೇರೆ ಅಂಗಡಿಗಳು ಬಾಡಿಗೆಗೆ ಸಿಗದೆ ಪರದಾಡುವಂತಾಗಿದೆ. ಕೆಲವರಿಗೆ ಪಂಚಾಯಿತಿ ತೀರ್ಮಾನ ಆಗುವವರೆಗೆ ಕಾಯುವಂತಾಗಿದೆ.

ಇಲ್ಲಿ ಹದಿನೆಂಟು ಮಳಿಗೆಗಳಿದ್ದು ಒಂದೊಂದು ಮಳಿಗೆಗಳಿಗೆ ಅಲ್ಪ ಸ್ವಲ್ಪ ವ್ಯತ್ಯಾಸದ ಬಾಡಿಗೆಗಳಿದ್ದು, ಅದರಲ್ಲಿ ಎಂಟು ಮಳಿಗೆಗಳನ್ನು ವರ್ತಕರುಗಳು ಸ್ವಂತ ನಡೆಸುತ್ತಿದ್ದಾರೆ. ಇನ್ನುಳಿದಿರುವ ಹತ್ತು ಮಳಿಗೆಗಳನ್ನು ವರ್ತಕರುಗಳು ಪಂಚಾಯಿತಿಯಿಂದ ಕಡಿಮೆ ಬೆಲೆಗೆ ಬಾಡಿಗೆಗೆÉ ಪಡೆದು, ಬೇರೆ ವರ್ತಕರುಗಳಿಗೆ ಅಂಗಡಿ ನಡೆಸಲು ಹೆಚ್ಚಿನ ಬಾಡಿಗೆಗೆ ನೀಡಿದ್ದಾರೆ ಎಂದು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಕೇವಲ ಐದು ಅಂಗಡಿಯವರು ಮಾತ್ರ ಸರಿಯಾಗಿ ಬಾಡಿಗೆ ಹಣ ಪಾವತಿ ಮಾಡಿರುವದಾಗಿ , ಇನ್ನುಳಿದಿರುವ ಅಂಗಡಿಗಳವರು ಯಾವದೇ ಬಾಡಿಗೆ ಹಣವನ್ನು ಪಾವತಿ ಮಾಡದೆ ಇರುವದು ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ. ಹತ್ತು ವರ್ಷಗಳ ಕಾಲ ಮಾತ್ರ ಅವರಿಗೆ ಮಳಿಗೆಗಳನ್ನು ಹರಾಜು ಹಾಕಿ ಕೊಟ್ಟಿದ್ದು, ಇದೀಗ ಅದರ ಕಾಲಾವಧಿ ಮುಗಿದಿದೆ. ಪುನಃ ಹರಾಜು ಪ್ರಕ್ರಿಯೆ ನಡೆದ ಮೇಲೆ ವರ್ತಕರುಗಳಿಗೆ ಬಿಟ್ಟು ಕೊಡಲಾಗುವದು ಎಂದಿದ್ದಾರೆ.

ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಸಂ¨ಂಧ ತೀರ್ಮಾನ ತೆಗೆದುಕೊಂಡು ಅಂಗಡಿಗಳನ್ನು ಮುಚ್ಚಿಸಲಾಗಿದೆ. ಇದಕ್ಕೆ ಕೆಲವು ವರ್ತಕರುಗಳು ಸಮ್ಮತಿಸಿದ್ದು, ಕೆಲವರು ನಿಷೇಧಾಜ್ಞೆ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಮುಂದಿನ ಸಾಮಾನ್ಯ ಸಭೆ ನಡೆಸುವಾಗ ಈ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಪಂಚಾಯಿತಿ ಅಧ್ಯಕ್ಷೆ ಅಕ್ಕಚ್ಚೀರ ರೋನಾ ಭೀಮಯ್ಯ, ಹಾಗೂ ಸದಸ್ಯ ಮಾಚಿಮಂಡ ಸುರೇಶ್ ಅಯ್ಯಪ್ಪ ತಿಳಿಸಿದ್ದಾರೆ.

- ಈಶಾನ್ವಿ