ಮಡಿಕೇರಿ, ಸೆ.16 :ಪ್ರಸ್ತುತ ವರ್ಷ ಮಹತ್ವದ ಪಂಚ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಲು ರೋಟರಿ ಸಂಸ್ಥೆಯ ರೋಟರಿ ಜಿಲ್ಲೆ 3181 ಘಟಕ ನಿರ್ಧರಿಸಿದೆ ಎಂದು ಇದರ ಜಿಲ್ಲಾ ರಾಜ್ಯಪಾಲ ಡಾ.ಆರ್.ಎಸ್.ನಾಗಾರ್ಜುನ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭೂಮಿ, ನಮ್ಮ ಆರೋಗ್ಯ, ಶೈಕ್ಷಣಿಕ ಒತ್ತಡ ನಿವಾರಣೆ, ಕಲಿಕಾ ನ್ಯೂನತೆ ನಿವಾರಣೆ ಹಾಗೂ ನಮ್ಮ ಹಳ್ಳಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವದಾಗಿ ಹೇಳಿದರು. “ನಮ್ಮ ಭೂಮಿ” ಕಾರ್ಯಕ್ರಮದ ಮೂಲಕ ಸುಮಾರು 1 ಲಕ್ಷ ಸಸಿಗಳನ್ನು ನೆಟ್ಟು ಅವುಗಳು ಮರಗಳಾಗಿ ಬೆಳೆಯುವವರೆಗೆ ಪೋಷಿಸುವ ಜವಾಬ್ದಾರಿಯನ್ನು ನಿಭಾಯಿಸಲಾಗುವದು. “ನಮ್ಮ ಆರೋಗ್ಯ”ದ ಮೂಲಕ ಪ್ರತಿ ಯೊಬ್ಬರನ್ನು ಸಕ್ಕರೆ ಖಾಯಿಲೆಯಿಂದ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ ವರ್ಷ ಸುಮಾರು 25 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಸಕ್ಕರೆ ಖಾಯಿಲೆ ಇರುವದನ್ನು ಖಾತ್ರಿ ಪಡಿಸಿಕೊಂಡಲ್ಲಿ ರೋಗ ಉಲ್ಬಣಗೊಳ್ಳುವದನ್ನು ತಡೆಯಬಹು ದಾಗಿದ್ದು, ಪ್ರತಿಯೊಬ್ಬರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನ ಜಾಗೃತಿ ಮೂಡಿಸಲಾಗುವದು.

ಇತ್ತೀಚಿನ ದಿನಗಳಲ್ಲಿ ಉನ್ನತ ಶ್ರೇಣಿಯ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಪೋಷಕರು ಕೂಡ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒತ್ತಡಕ್ಕೆ ಒಳಗಾಗು ತ್ತಿದ್ದಾರೆ. ಈ ಎರಡೂ ವರ್ಗದ ಒತ್ತಡ ನಿವಾರಣೆಗಾಗಿ “ಶೈಕ್ಷಣಿಕ ಒತ್ತಡ ನಿವಾರಣೆ”

(ಮೊದಲ ಪುಟದಿಂದ) ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗುವದು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸರಕಾರಿ ಶಾಲೆಗಳಲ್ಲಿ ಕಂಡು ಬರುತ್ತಿರುವ ಕಲಿಕಾ ನ್ಯೂನತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯನ್ನು ತುಂಬಿ ವಿದ್ಯಾರ್ಥಿ ಗಳನ್ನು ಮುಖ್ಯವಾಹಿನಿಗೆ ತರಲು “ಕಲಿಕಾ ನ್ಯೂನತೆ ನಿವಾರಣೆ” ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುವದು ಎಂದರು.

“ನಮ್ಮ ಹಳ್ಳಿ” ಕಾರ್ಯಕ್ರಮದ ಮೂಲಕ ರೋಟರಿ ಸಂಸ್ಥೆ ಕೇವಲ ನಗರಕ್ಕಷ್ಟೇ ಸೀಮಿತವಲ್ಲ ಎನ್ನುವದನ್ನು ಸಾಬೀತು ಪಡಿಸಲಿದ್ದು, ಹಳ್ಳಿಗಳನ್ನು ದತ್ತು ಪಡೆದು ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವದು. ಸುಮಾರು 70 ಗ್ರಾಮಗಳನ್ನು ದತ್ತು ಪಡೆಯಲು ನಿರ್ಧರಿಸಲಾಗಿದ್ದು, ಆರೋಗ್ಯ ತಪಾಸಣೆ, ಶೌಚಾಲಯಗಳ ನಿರ್ಮಾಣ, ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶ್ವದಾದ್ಯಂತ 185 ದೇಶಗಳಲ್ಲಿ 36 ಸಾವಿರ ಕ್ಲಬ್‍ಗಳನ್ನು ಹೊಂದಿರುವ ರೋಟರಿ ಸಂಸ್ಥೆ 12 ಲಕ್ಷ ಸದಸ್ಯರನ್ನು ಹೊಂದಿದೆ. ರೋಟರಿಯ ದತ್ತಿನಿಧಿಯ ಮೂಲಕ 1 ಬಿಲಿಯನ್ ಡಾಲರ್ ಹಣವಿದ್ದು, 300 ಬಿಲಿಯನ್ ಡಾಲರ್‍ನ್ನು ಸಾಮಾಜಿಕ ಕಳಕಳಿಗಾಗಿ ವಿನಿಯೋಗಿಸಲಾಗಿದೆ ಎಂದು ಅವರು ಹೇಳಿದರು.

ವಿಶ್ವವನ್ನು ಪೋಲಿಯೋ ಮುಕ್ತಗೊಳಿಸುವ ಗುರಿಯನ್ನು ಸಾಧಿಸುವಲ್ಲಿ ರೋಟರಿ ಸಂಸ್ಥೆ ಯಶಸ್ವಿಯಾಗಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ 22 ಹಾಗೂ ಅಪಘಾನಿಸ್ತಾನದಲ್ಲಿ ಇಬ್ಬರು ರೋಗಿಗಳಷ್ಟೇ ಇದ್ದಾರೆ ಎಂದ ಡಾ.ಆರ್.ಎಸ್.ನಾಗಾರ್ಜುನ 2016 ರ ಅಂತ್ಯಕ್ಕೆ ವಿಶ್ವ ಸಂಪೂರ್ಣ ಪೋಲಿಯೊ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಹಾಯಕ ರಾಜ್ಯಪಾಲ ಡಾ.ಪ್ರಶಾಂತ್ ಮಾತನಾಡಿ ಪೋಲಿಯೊ ಮುಕ್ತ ವಿಶ್ವಕ್ಕಾಗಿ ಶ್ರಮಿಸಿದ ರೋಟರಿ ಸಂಸ್ಥೆ ಇದೀಗ ಮುಂದಿನ ಗುರಿಯಾಗಿ “ಟೀಚ್” ಕಾರ್ಯಕ್ರಮದ ಮೂಲಕ ಸಾಕ್ಷರತೆಗೆ ಆದ್ಯತೆ ನೀಡಲು ಮುಂದಾಗಿದೆ ಎಂದರು. ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳಿಗೆ ಸಂಚಾರಿ ವಿಜ್ಞಾನ ಕೇಂದ್ರ (ಮೊಬೈಲ್ ಸೈನ್ಸ್ ಲ್ಯಾಬ್) ಸಂಚರಿಸಲಿದ್ದು, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗುವದು. ಆ ಮೂಲಕ ಪ್ರಯೋಗಗಳನ್ನು ಮಾಡಲು ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ಇದು ಮೂರು ವರ್ಷದ ಯೋಜನೆಯಾಗಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಮಡಿಕೇರಿ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಮಾತನಾಡಿ ಈ ಹಿಂದೆ ಸಂಸ್ಥೆ ಜಿಲ್ಲೆಯಲ್ಲಿ ಮಾಡಿದ ಸಾಧನೆಗಳು ಹಾಗೂ ಮುಂದೆ ಮಾಡಲಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖ ರಾದ ಸುಧಾ ನಾಗಾರ್ಜುನ್, ಕಾರ್ಯದರ್ಶಿ ಸಲಿಲಾ ಪಾಟ್ಕರ್ ಹಾಗೂ ಜೋóನಲ್ ಲೆಫ್ಟಿನೆಂಟ್ ಪಾರ್ಥ ಚಂಗಪ್ಪ ಉಪಸ್ಥಿತರಿದ್ದರು.