ಗೋಣಿಕೊಪ್ಪಲು, ಜು. 8: ಮಡಿಕೇರಿ ವಸತಿ ಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಮಾದಪಂಡ ಗಣಪತಿ ಅವರ ನಿಲುವು ತನಗೆ ಆಶ್ಚರ್ಯ ಮೂಡಿಸಿದೆ. ತಾನು ಮಲ್ಲೇಶ್ವರಂ ಶಾಸಕನಾಗಿದ್ದ ಸಂದರ್ಭ ಮೂರುವರ್ಷ ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಲವು ಪ್ರಕರಣಗಳಲ್ಲಿ ಪಾರದರ್ಶಕತೆಯನ್ನು ಹೊಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಗೆ ದೂಡಲ್ಪಟ್ಟ ನೈಜ ವಿಚಾರ ತನಗೆ ತಿಳಿದಿಲ್ಲ. ಉತ್ತಮ, ದಕ್ಷ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿರುವದು ಪೆÇಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಗಣಪತಿ ಅವರ ಕುಟುಂಬಕ್ಕೆ ನ್ಯಾಯದೊರಕಿಸಲು ಪ್ರಾಮಾಣಿಕನಾಗಿ ಪ್ರಯತ್ನಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಸೀತಾರಾಮ್ ಅವರು ಗಣಪತಿ ಅವರ ಪೆÇೀಷಕರಾದ ಕುಶಾಲಪ್ಪನವರೂ ತನಗೆ ಆತ್ಮೀಯರು. ಸಹೋದರ ತಮ್ಮಯ್ಯ ಅವರೂ ಪೆÇಲೀಸ್ ಇಲಾಖೆಯಲ್ಲಿದ್ದು ಗಣಪತಿ ಅವರ ಸಾವು ತನಗೂ ವೈಯಕ್ತಿಕವಾಗಿ ಅತೀವ ದುಃಖ ತರಿಸಿದೆ ಎಂದು ಹೇಳಿದರು. ತಾನು ಮಲ್ಲೇಶ್ವರಂ ಶಾಸಕನಾಗಿದ್ದ ಅವಧಿಯಲ್ಲಿ 2008 ರಲ್ಲಿ ತನ್ನ ಮನೆಗೆ ಗಣಪತಿ ಅವರು 2-3 ಬಾರಿ ಭೇಟಿ &divound;ೀಡಿ, ಎನ್‍ಕೌಂಟರ್‍ನಲ್ಲಿ ಹತ್ಯೆಯಾದ ರೌಡಿ ಪ್ರಶಾಂತ್ ಪೆÇೀಷಕರ ವಿಚಾರಣೆ ಸಂದರ್ಭ ಕೆಲವೊಂದು ಒತ್ತಡವನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದರು. ‘ನೀನೊಬ್ಬ ಧೈರ್ಯಶಾಲಿ ಅಧಿಕಾರಿ ಯಾರಿಗೂ ಭಯ ಬೀಳಬೇಡ. &divound;ನ್ನ ಕರ್ತವ್ಯವನ್ನು ನೀನು ನಿಭಾಯಿಸು' ಈ ಎಂದು ಧೈರ್ಯತುಂಬಿದ್ದೆ. ಆದರೆ, ಮತ್ತೆ ನನ್ನನ್ನು ಭೇಟಿಯಾಗಲಿಲ್ಲ. ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಮೇಲಧಿಕಾರಿಗಳ ಕಿರುಕುಳದ ಬಗ್ಗೆ ಅಂದು ತನಗೇನೂ ಹೇಳಿರಲಿಲ್ಲ. ಈಗಾಗಲೇ ಬೆಂಗಳೂರಿನ ಸಿಐಡಿ ತಂಡ ಕೊಡಗಿಗೆ ಆಗಮಿಸಿದ್ದು, ಪಾರದರ್ಶಕ ತ&divound;ಖೆ ನಡೆಯಲಿದೆ. ಈ ಬಗ್ಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಯಶವಂತಪುರದಲ್ಲಿ ಗಣಪತಿ ಅವರು ಕರ್ತವ್ಯದಲ್ಲಿದ್ದಾಗ ಅವರಿಗೆ ತನ್ನ ಕಡೆಯಿಂದ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ ಎಂದು ಸೀತಾರಾಮ್ ನೆನಪಿಸಿಕೊಂಡರು.