ಮಡಿಕೇರಿ, ಜ. 22: ತಾಳತ್‍ಮನೆ ಯುವಕ ಹಾಗೂ ಯುವತಿ ಮಂಡಲದ ಬೆಳ್ಳಿ ಮಹೋತ್ಸವದ ಸಮಾರಂಭ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬೆಳ್ಳಿ ಮಹೋತ್ಸವದ ಸಮಾರಂಭವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಉಪಸ್ಥಿತರಿದ್ದರು.
ಬೆಳ್ಳಿ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಉದ್ಘಾಟಿಸಿದರು. ಈ ಸಂದರ್ಭ ಅತಿಥಿಗಳಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಬಿ.ಜಿ. ಕಾರ್ಯಪ್ಪ, ಮದೆ ಗ್ರಾ.ಪಂ. ಸದಸ್ಯೆ ಪೊನ್ನೆಟ್ಟಿ ನಿತ್ಯಕುಮಾರಿ, ನೇತಾಜಿ ಯುವಕ ಮಂಡಲದ ಮಾಜಿ ಅಧ್ಯಕ್ಷರು, ಮದೆ ಗ್ರಾ.ಪಂ. ಸದಸ್ಯ ಗಿರೀಶ್ ತಾಳತಮನೆ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ಮಹಮದ್ ರಫೀಕ್, ಯುವತಿ ಮಂಡಳಿ ಅಧ್ಯಕ್ಷೆ ನೇತ್ರಾವತಿ ಹಾಗೂ ಇನ್ನಿತರರು ಇದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ 10 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಮಡಿಕೇರಿಯ ಸಮುದ್ರ ಫ್ರೆಂಡ್ಸ್ ‘ಎ’ ತಂಡ ಪಡೆಯಿತು. ಹಾಸನದ ಸ್ಟೇಡಿಯಂ ಬಾಯ್ಸ್ ದ್ವಿತೀಯ, ಸಮುದ್ರ ಪ್ರೆಂಡ್ಸ್ ‘ಬಿ’ ತೃತೀಯ ಹಾಗೂ ಕುಂಜಿಲ ಆರ್‍ವೈಸಿ ಚತುರ್ಥ ಬಹುಮಾನ ಪಡೆದುಕೊಂಡಿತು.
ಇಂದು ರಾತ್ರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಹಾಗೂ ಅರೆಭಾಷಾ ಸಹಯೋಗದೊಂದಿಗೆ ರಾಜ್ಯಮಟ್ಟದ ಸಾಂಸ್ಕøತಿಕ ಮೇಳ ನಡೆಯಿತು. ಈ ಸಂದರ್ಭ ಡೊಳ್ಳು ಕುಣಿತ, ಕಂಸಾಳೆ ಹಾಡು ಕಾರ್ಯಕ್ರಮ ನಡೆಯಿತು.