ನಾಪೋಕ್ಲು, ಸೆ. 29: ನೆಲಜಿ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನಲ್ಲಿ ರೂ. 17.15 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 8 ಲಾಭಾಂಶ ನೀಡಲು ತೀರ್ಮಾನಿಸಿದೆ ಎಂದು ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚೀಯಕಪೂವಂಡ ಎಂ. ಅಪ್ಪಚ್ಚು ಮಾಹಿತಿ ನೀಡಿದರು.
ಸಂಘದಲ್ಲಿ ರೂ. 274.89 ಲಕ್ಷ ಠೇವಣಿಗಳಿಸಿದ್ದು, ಒಟ್ಟು 952 ಸದಸ್ಯರಿದ್ದಾರೆ. ಸದಸ್ಯರ ಪಾಲು ಬಂಡವಾಳ ರೂ. 109.68 ಲಕ್ಷ, ಸದಸ್ಯರಿಂದ ವಿವಿಧ ಠೇವಣಿಗಳಿಂದ ಒಟ್ಟು ರೂ. 384.57 ಲಕ್ಷ ಠೇವಣಿಯನ್ನು ಹೊಂದಿದೆ ಎಂದು ತಿಳಿಸಿದರು.
ಸದಸ್ಯರಿಗೆ ಸಂಘ ಒಟ್ಟು ರೂ. 897.45 ಲಕ್ಷ ಸಾಲ ನೀಡಿದ್ದು, ಶೇ. 85 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಕೃಷಿಗೆ ಸಾಲವನ್ನು ನೀಡಿದ್ದು, ಶೇ. 100 ವಸೂಲಾತಿಯ ಸಾಧನೆ ಮಾಡಿದೆ ಎಂದರು.
ಉಪಾಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ, ನಿರ್ದೇಶಕರಾದ ಮಂಡೀರ ಚಂಗಪ್ಪ, ಅಪ್ಪುಮಣಿಯಂಡ ಸುಬ್ಬಯ್ಯ, ಮಂಡೀರ ಪೊನ್ನಣ್ಣ, ತೆಕ್ಕಡ ಪೊನ್ನಪ್ಪ, ಮುಕ್ಕಾಟಿರ ಕೆ. ಸುಬ್ಬಯ್ಯ, ಕೈಬುಲಿರ ಉತ್ತಪ್ಪ, ಕೈಬುಲಿರ ಯಶೋದ, ಚೀಯಕಪೂವಂಡ ರೀನಾ ಹಾಗೂ ಪಾಲೆ ಮೋಟು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಉಪಸ್ಥಿತರಿದ್ದರು.