ವೀರಾಜಪೇಟೆ, ನ. 26: ಅರಪಟ್ಟು ಗ್ರಾಮದಿಂದ ಕುಲ್ಲಚಂಡ ಐನ್‍ಮನೆಗೆ ಹೋಗುವ ನೂತನ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿಯ ರೂ. 4 ಲಕ್ಷದ ಅನುದಾನದಲ್ಲಿ ಡಾಮರೀಕರಣ ರಸ್ತೆ ನಿರ್ಮಾಣಕ್ಕಾಗಿ ಶಾಸಕ ಕೆ.ಜಿ. ಬೋಪಯ್ಯ ಅಕ್ಟೋಬರ್ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.

ರಸ್ತೆ ಉದ್ಘಾಟನೆ ಸಂದರ್ಭ ಸ್ಥಳೀಯ ಪಂಚಾಯಿತಿ ಸದಸ್ಯ ಕೊಡೀರ ಪ್ರಸನ್ನ, ಕಣಿಯಂಡ ಪ್ರಕಾಶ್, ಬಲ್ಯಮೀದೇರಿರ ರೋಹಿಣಿ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾಮಸ್ಥರು, ಗುತ್ತಿಗೆದಾರರಾದ ಪಟ್ಟಚೆರವಂಡ ಪೂಣಚ್ಚ ಹಾಗೂ ಕುಲ್ಲಚಂಡ ಕುಟುಂಬಸ್ಥರು ಹಾಜರಿದ್ದರು.