ಸುಂಟಿಕೊಪ್ಪ, ಜು. 20: ಸುಂಟಿಕೊಪ್ಪದ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಸುಮಾರು 42 ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸಿ ವಯೋಮಾನ ಹಾಗೂ ಅನಾರೋಗ್ಯದ ನಿಮಿತ್ತ ಹ.ಮ. ಗಣೇಶ್ ಶರ್ಮ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.ಮೂಲತಃ ಶೃಂಗೇರಿಯವರಾದ ಇವರು 1974 ರಿಂದ ಇಲ್ಲಿನ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಉತ್ತಮ ಒಡನಾಟದಿಂದ ಜೀವನ ಸಾಗಿಸುತ್ತಿದ್ದರು. ಭಜನೆ, ಭಗವದ್ಗೀತೆ, ಸಂಸ್ಕøತ ಸಾಹಿತ್ಯದ ಪಾಂಡಿತ್ಯವನ್ನು ಭಕ್ತಾದಿಗಳಿಗೆ ಧಾರೆಯೆರೆದಿದ್ದಾರೆ.ಸುದೀರ್ಘ ಸೇವೆಯಿಂದ ನಿವೃತ್ತರಾದ ಅವರನ್ನು ಇಲ್ಲಿನ ವಿಶ್ವ ಹಿಂದೂ ಪರಿಷದ್, ಗೌರಿ ಗಣೇಶೋತ್ಸವ ಸಮಿತಿ, ಮಾತೃ ಮಂಡಳಿ ಹಾಗೂ ಸಾರ್ವಜನಿಕರ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.ಈ ಸಂದರ್ಭ ಮಾತನಾಡಿದ ಅವರು, ಸಹಾಯ ಹಸ್ತ ನೀಡಿದ, ತನಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ ಭಕ್ತಾದಿಗಳಿಗೆ ಹಾಗೂ ದಾನಿಗಳ ಸೇವೆಯನ್ನು ಸ್ಮರಿಸಿದರು.ಈ ಸಂದರ್ಭ ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನು ಕಾವೇರಪ್ಪ, ಉಪಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕಾರ್ಯದರ್ಶಿ ಎಂ.ಎಸ್. ಸುನಿಲ್, ಸದಸ್ಯರಾದ ಶಿವಕುಮಾರ್, ಚಂದ್ರಕಾಂತ್, ಬಿ.ಕೆ. ಪ್ರಶಾಂತ್, ಮುತ್ತಪ್ಪ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಿ.ಆರ್. ಸುಕುಮಾರ್, ಉಪಾಧ್ಯಕ್ಷ ಪಿ.ಕೆ. ಅನಿಲ್ ಕುಮಾರ್, ಮಾತೃ ಮಂಡಳಿಯ ಅಧ್ಯಕ್ಷೆ ರಾಜಲಕ್ಷ್ಮಿ, ಸದಸ್ಯರಾದ ಸಬಿತ, ಲೀಲಾ ಮೇದಪ್ಪ, ಬಿ.ಐ. ಭವಾನಿ, ಬಿಲ್ಲವ ಸಂಘದ ಅಧ್ಯಕ್ಷ ಬಿ.ಕೆ. ಮೋಹನ್, ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಹಾಗೂ ಇನ್ನಿತರರು ಇದ್ದರು.