ಸುಂಟಿಕೊಪ್ಪ, ಸೆ. 27: ಹಟ್ಟಿಹೊಳೆಯ ನಿರ್ಮಲಾ ವಿದ್ಯಾಭವನದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಲಯಮಟ್ಟ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗಣನೀಯ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಮಾದಾಪುರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಬಾಲಕರ ವಿಭಾಗದ ವಾಲಿಬಾಲ್‍ನಲ್ಲಿ ಪ್ರಥಮ ಥ್ರೋಬಾಲ್ ಪ್ರಥಮ, ಬಾಸ್ಕೆಟ್‍ಬಾಲ್ ದ್ವಿತೀಯ, ಹಾಕಿ ಪ್ರಥಮ, ಶೆಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಬಾಸ್ಕೆಟ್‍ಬಾಲ್ ಪ್ರಥಮ, ಹಾಕಿ ಪ್ರಥಮ ಸ್ಥಾನ ಪಡೆದಿದ್ದಾರೆ.
10 ಮೀ. ಬಾಲಕರ ಓಟದ ಸ್ಪರ್ಧೆಯಲ್ಲಿ ವತ್ಸ ಪ್ರಥಮ, 200 ಮೀ. ಓಟದಲ್ಲಿ ಆಕ್ಮಲ್ ದ್ವಿತೀಯ, ಹೈಜಂಪ್ ಗಗನ್ ದ್ವಿತೀಯ, ರಿಲೆಯಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ 100 ಮೀ. ಓಟದಲ್ಲಿ ಸಂಗೀತ ಪ್ರಥಮ, ಹೈಜಂಪ್‍ನಲ್ಲಿ ಶಮ ಪ್ರಥಮ, ಶಾಟ್‍ಪುಟ್ ಹಾಗೂ ಡಿಸ್ಕಸ್‍ನಲ್ಲಿ ಚಂದನ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲೆಯ ವಲಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಬಾಲಕಿಯರ ವಿಭಾಗದ ವಾಲಿಬಾಲ್‍ನಲ್ಲಿ ಪ್ರಥಮ, ಥ್ರೋಬಾಲ್ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ಶಾಟ್‍ಪುಟ್‍ನಲ್ಲಿ ಬಿ.ಬಿ. ಮಸೂದ ಪ್ರಥಮ ಸ್ಥಾನ, ಲಾಂಗ್ ಜಂಪ್‍ನಲ್ಲಿ ಜಯಶ್ರೀ ತೃತೀಯ ಸ್ಥಾನ ಪಡೆದವರು ಬಾಲಕರ ವಿಭಾಗದ ಶಾಟ್‍ಪುಟ್‍ನಲ್ಲಿ ತೇಜಸ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಣಿವೆಯ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲೆಯ ಬಾಲಕರು ಹಾಕಿಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಶಾಟ್‍ಪುಟ್ ಹಾಗೂ ಡಿಸ್ಕಸ್ ಥ್ರೋಬಾಲ್‍ನಲ್ಲಿ ಚಂದನ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.