ಸುಂಟಿಕೊಪ್ಪ, ಡಿ. 15: ‘ಎಲ್ಲಾ ಹೊಟ್ಟೆಗಾಗಿ ಮೂರು ಗೇಣು ಬಟ್ಟೆಗಾಗಿ’ ಎಂಬ ನಾಣ್ಣುಡಿಯಂತೆ ಮಹಾರಾಷ್ಟ್ರದ ನಾಸಿಕ್‍ನಿಂದÀ ಬಂದ ಯುವಕರ ತಂಡವೊಂದು ಪಟ್ಟಣದಲ್ಲಿ ಅನೇಕ ಸಾಹಸ ಪ್ರದರ್ಶನಗಳನ್ನು ನೀಡಿ ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡಿದರು.
ನಾಸಿಕ್‍ನಿಂದ ಕೂಲಿ ಅರಸಿಕೊಂಡು ಬಂದ ಜಾಕೀರ್ ನೇತೃತ್ವದ ಯುವಕರ ತಂಡ ಇಂದು ಬೆಳಿಗ್ಗೆ ಪಟ್ಟಣದ ಕನ್ನಡ ವೃತ್ತದ ಬಳಿ ಮರದ ಅಂದಾಜು 15 ಅಡಿ ಉದ್ದದ 2 ಬಡಿಗೆಗಳನ್ನು ಏರಿ ಬಡಿಗೆಯನ್ನು ಹಿಡಿದು ರಸ್ತೆಯಲ್ಲಿ ನಡೆಯುವ ಮೂಲಕ ಚೂಪಾದ 3 ಆಯುಧಗಳನ್ನು ಉದ್ದ ಬಡಿಗೆಯಿಂದ ಮೇಲೆತ್ತಿ ಅದು ಶರೀರಕ್ಕೆ ತಗಲದಂತೆ ತಪ್ಪಿಸುವ, ಬಲಗೈಯಿಂದ ಗ್ರಾನೈಟ್ ಕಲ್ಲನ್ನು ಒಡೆದು ತುಂಡರಿಸಿ ಸಾಹಸ ಪ್ರದರ್ಶಿಸಿದರು. ಆನಂತರ ಜನರಿಂದ ಒಂದಿಷ್ಟು ಭಕ್ಷೀಸು ಪಡೆದುಕೊಂಡು ಹಿಂತೆರಳಿದರು.