ಮಡಿಕೇರಿ, ನ. 3: ಮಡಿಕೇರಿ ರೇಂಜ್ ಜಮ್ ಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ನ.5 ರಂದು ಸಂಜೆ 6.30 ಗಂಟೆಗೆ ಸುಂಟಿಕೊಪ್ಪದ ಖದೀಜ ಉಮ್ಮ ಮದರಸ ಆವರಣದÀಲ್ಲಿ ಸುನ್ನಿ ಆದರ್ಶ ಸಮ್ಮೇಳನ ಮತ್ತು ಮುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕರು ಪ್ರವಾದಿ ಪೈಗಂಬರ್ ಅವರ ಜೀವನ ಕಾಲದಲ್ಲಿಯೇ ಭಾರತದಲ್ಲಿ ಇಸ್ಲಾಂ ಧರ್ಮ ಪ್ರಚಾರಗೊಂಡಿದ್ದು, 1400 ವರ್ಷಗಳಿಂದ ಇಸ್ಲಾಂ ಧರ್ಮದ ಆಚಾರ, ವಿಚಾರಗಳನ್ನು ಶಾಂತಿಯುತ ವಾಗಿ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಕಾಲಕ್ರಮೇಣ ಇಸ್ಲಾಮಿನ ನೈಜ ಆದರ್ಶಗಳಲ್ಲಿ ಹಲವಾರು ರೀತಿಯ ಬಿನ್ನಾಭಿಪ್ರಾಯ ಗಳು ಹಾಗೂ ನೂತನ ವಾದಗಳು ಮೊಳಕೆಯೊಡೆದು ಗೊಂದಲಗಳು ಸೃಷ್ಟಿಯಾದವು ಎಂದು ಅಭಿಪ್ರಾಯ ಪಟ್ಟರು.

ಈ ಗೊಂದಲಗಳ ನಿವಾರಣೆ, ಧಾರ್ಮಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಶಾಂತಿ, ಸೌಹಾರ್ದತೆ ಯನ್ನು ಸೃಷ್ಟಿಸುವ ಸಂರಕ್ಷಣೆಯ ಸಲುವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಖ್ಯಾತ ವಿದ್ವಾಂಸರಾದ ಎಸ್.ಕೆ.ಎಸ್.ಎಸ್.ಎಫ್. ಇಸ್ತಿಕಾಮ ಕೇಂದ್ರ ಸಮಿತಿಯ ನೇತಾರರಾದ ಎಂ.ಟಿ. ಅಬೂಬಕರ್ ದಾರಿಮಿ, ಮುಸ್ತಫ, ಅಶ್ರಫಿ-ಕಕ್ಕುಪಡಿ, ಸಲಾಂ ಫೈಜಿ ಅವರು ವಿಷಯ ಮಂಡನೆ ಹಾಗೂ ಮುಕ್ತ ಸಂವಾದದ ನೇತೃತ್ವವನ್ನು ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ನಾಯಿಬ್ ಖಾಜಿ ಅಬ್ದುಲ್ಲಾ ಫೈಜಿ ವಹಿಸಲಿದ್ದು, ಉಸ್ತಾದ್ ಎ.ಸಿ. ಉಸ್ಮಾನ್ ಫೈಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಅಲ್ ಹಾಜ್ ಕೆ.ಎಂ.ಇಬ್ರಾಹಿಂ ಮಾಸ್ಟರ್ , ಕೆ.ಉಸ್ಮಾನ್ ಹಾಜಿ, ಸಿ.ಪಿ.ಎಂ. ಬಷೀರ್ ಹಾಜಿ, ಬಾಪು ಹಾಜಿ-ಕೊಡಗರಹಳ್ಳಿ, ಯೂಸುಫ್ ಹಾಜಿ, ಎ.ಸಲೀಂ, ಕೆ.ಎ.ಯಾಕೂಬ್, ಹಸನ್ ಕುಂಞÂ ಹಾಜಿ, ಹಸೈನಾರ್ ಮುಸ್ಲಿಯಾರ್, ಪಾಲ್ಗೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಂ.ಆರ್.ಜೆ.ಎಂ. ಅಧ್ಯಕ್ಷ ವೈ.ಎಂ. ಉಮರ್ ಪೈಜಿ, ಕಾರ್ಯದರ್ಶಿ ಎನ್.ಎನ್.ಇಕ್ಬಾಲ್ ಮೌಲವಿ, ಪ್ರಮುಖರಾದ ಕೆ.ಎ.ಸುಹೈಬ್ ಪೈಜಿ, ಎ.ಎಂ.ಮಜೀದ್, ರಫೀಕ್ ನಿಜಾಮಿ ಹಾಗೂ ಹಂಝ ಉಪಸ್ಥಿತರಿದ್ದರು.