ಶ್ರೀಮಂಗಲ, ಡಿ. 30: ಯುಕೋ ಸಂಘಟನೆಯ ಕಾರ್ಯಕ್ರಮದಂತೆ ಮೂರನೇ ವರ್ಷದ “ಯುಕೋ ಕೊಡವ ಮಂದ್ ನಮ್ಮೆ” ನಾಳೆ (ಜ.01) ಮೂರ್ನಾಡಿನ ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಯುಕೋ ಕಚೇರಿಯಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಪಾಂಡಾಣೆ ಮಂದ್‍ನಲ್ಲಿ ತಕ್ಕರಾದ ಪಳಂಗಂಡ ಗಪ್ಪು ಗಣಪತಿ ಅವರು ಸಾಂಸ್ಕøತಿಕ ಮೆರವಣಿಗೆಗೆ ಚಾಲನೆ ನೀಡಲಿದ್ದು, ಆ ನಂತರ ಮೂರ್ನಾಡಿನ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ತೆರಳಿ, ಕೊಡಗಿನ ಪ್ರಖ್ಯಾತ ಮಂದ್‍ಗಳ ಮಧ್ಯೆ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಪಾಂಡಾಣೆ ನಾಡ್ ಮಂದ್‍ಗೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರಿಗೆ ವಿಶೇಷ ಗೌರವ ಸಮರ್ಪಿಸ ಲಾಗುವದು. ಈ ಸಂದರ್ಭ ಎಂ.ಎಲ್.ಸಿ. ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ತೀತಾಮಾಡ ಅರ್ಜುನ್ ದೇವಯ್ಯ, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮುದ್ದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಗಣೇಶ್ ಅತಿಥಿಗಳಾಗಿ ಆಗಮಿಸಲಿದ್ದು, ಪೈಪೋಟಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ವರ್ಷ 35 ಕ್ಕೂ ಹೆಚ್ಚಿನ ಮಂದ್‍ಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಎಲ್ಲಾ ಮಂದ್‍ಗಳಿಗೆ ವಿಷೇಷವಾಗಿ ‘ಮಂದ್ ಮರ್ಯಾದಿ’ ಗೌರವ ನೀಡಿದ ನಂತರ ಮಂದ್- ಮಂದ್‍ಗಳ ನಡುವೆ ಸಾಂಸ್ಕøತಿಕ ಪೈಪೋಟಿ ನಡೆಸ ಲಾಗುವದು, ಈ ಸಾಲಿನಲ್ಲಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಪರಿಯಕಳಿ, ಬಾಳೋಪಾಟ್, ಹಾಗೂ ವಾಲಗತ್ತಾಟ್ ಪೈಪೋಟಿ, ಹಾಗೆಯೇ ಪುರುಷರಿಗೆ ‘ಕೊಂಬಮೀಸೆರ ಬಂಬೊ’ ಹಾಗೂ ಮಹಿಳೆಯರಿಗೆ ‘ಬೋಜಿ ಜಡೆರ ಬೋಜಕ್ಕ’ ಎಂಬ ಸ್ಪಧೆರ್É ಏರ್ಪಡಿಸಲಾಗಿದೆ ಎಂದು ಹೇಳಿದರು.

ಸಂಜೆ 4.30 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ವಿಶೇಷ ಆಥಿತಿಗಳಾಗಿ, ಸಂಸದರಾದ ಡಿ. ಕುಪೇಂದ್ರ ರೆಡ್ಡಿ, ಸಿ.ಎಸ್.ಪುಟ್ಟರಾಜು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಭಾಗವಹಿಸಲಿ ದ್ದಾರೆ, ಅಲ್ಲದೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಪಾಂಡಾಣೆ ಮಂದ್‍ಗೆ ಸಂಬಂಧಿಸಿದ ಎಲ್ಲಾ ಊರು ಹಾಗೂ ನಾಡ್ ಮಂದ್‍ಗಳ ಎಲ್ಲಾ ತಕ್ಕ ಮುಖ್ಯಸ್ಥರು, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮುದ್ದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಗಣೇಶ್ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭ ಸಂಸದ ಕುಪೇಂದ್ರ ರೆಡ್ಡಿ ಅವರು, ಯುಕೋ ಸಂಘಟನೆಯ ಜಬ್ಬೂಮಿ ಬಾಳೋ ಪಾದಯಾತ್ರೆಯ ಸಂದರ್ಭ ತಮ್ಮ ಸಂಸದರ ನಿಧಿಯಿಂದ ಕೊಡಗಿನ ಮಂದ್‍ಗಳ ಪುನಶ್ಚೇತನಕ್ಕಾಗಿ ಭರವಸೆ ನೀಡಿದ್ದ 10 ಲಕ್ಷ ರೂಪಾಯಿಗಳ ಅನುದಾನದ ಅನುಷ್ಠಾನದ ಕುರಿತು ಘೋಷಿಸಲಿರುವದಾಗಿ ಹೇಳಿದರು.

ಕೊಡಗಿನ ಎಲ್ಲಾ ಸಾಂಪ್ರದಾಯಿಕ ಮಂದ್‍ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಪೋಟಿಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ಹೊರಹೊಮ್ಮುವ ತಂಡಕ್ಕೆ 25000 ರೂಪಾಯಿಗಳ ನಗದು ಹಾಗೂ ಟ್ರೋಫಿಯನ್ನೊ¼ Àಗೊಂಡ ‘ಗಟ್ಟಿ ಮಂದ್’ ಪ್ರಶಸ್ತಿಯನ್ನು ನೀಡಲಾಗುವದು ಹಾಗೂ ಉಳಿದಂತೆ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಪರಿಯಕಳಿ ಹಾಗೂ ವಾಲಗತ್ತಾಟ್ ಸೇರಿದಂತೆ ಪೈಪೋಟಿಗಳಿಗೆ 2 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನವನ್ನು ನೀಡಲಾಗುವದು ಎಂದು ಅವರು ಮಾಹಿತಿ ನೀಡಿದರು.

ಕೊಡವ ಮಂದ್ ನಮ್ಮೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ವರ್ಷ ಆಕರ್ಷಕ ಕೊಡವ ಸಾಂಪ್ರದಾಯಿಕ ಆಭರಣಗಳ ಯೋಜನೆಯನ್ನು ಪರಿಚಯಿಸುತ್ತಿದ್ದು, ‘ಮೊದ ಜೊಪ್ಪೆ’ ಎಂಬ ಈ ಯೋಜನೆಯಲ್ಲಿ, ಜೋಮಾಲೆ, ಜೋಡಿ ಕಡಗ, ಪೀಚೆಕತ್ತಿ, ಅಧರ್À ಪವನ್ ಹಾಗೂ ಕಾಲು ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಗುವದು. ಇದು ಈ ವರ್ಷದ ಮಂದ್ ನಮ್ಮೆಯ ಆಕರ್ಷಣೆಗಳಲ್ಲಿ ಒಂದು ಎಂದು ಮಾಹಿತಿ ನೀಡಿದರು.

ಈ ವರ್ಷದ ಮಂದ್ ನಮ್ಮೆಗೆ ಕೊಡಗಿನಾದ್ಯಂತ ಮಾತ್ರವಲ್ಲದೆ ಹೊರಗಿನಿಂದಲೂ ಅಭಿಮಾನಿಗಳು ಆಗಮಿಸಲಿದ್ದು, ಮಂದ್ ನಮ್ಮೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ಆಚರಿಸುವ ನಿಟ್ಟಿನಲ್ಲಿ, ಪಾಂಡಾಣೆ ಮಂದ್‍ಗೆ ಸಂಬಂಧಿಸಿದ ಸುತ್ತಲಿನ ಊರುಗಳ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಗಿದೆ. ಈ ವರ್ಷದ ಮಂದ್‍ನಮ್ಮೆಗೆ ಅತ್ಯದಿಕ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದು, ಸುಮಾರು 5000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಪುದಿಯೊಕ್ಕಡ ದಿನೇಶ್, ಮಡೆಯಂಡ ಸುತನ್, ಪ್ರೀಣ, ಪಳಂಗಿಯಂಡ ದರ್ಶನ್ ಮುತ್ತಪ್ಪ, ಕೈಪಟ್ಟಿರ ಮಂದಣ್ಣ, ಅವರೆಮಾದಂಡ ಅನಿಲ್, ನೂತನ್, ಮುಂಡಂಡ ಅರುಣ್, ಮುಂತಾದವರು ಭಾಗವಹಿಸಿದ್ದರು.