ಮಡಿಕೇರಿ, ಡಿ. 28: ಅಮ್ಮತ್ತಿಯ ಮಿಲನ್ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ತಾ. 30 ರಂದು (ನಾಳೆಯಿಂದ) ಜ. 1ರವರೆಗೆ ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 9ನೇ ವರ್ಷದ ರಾಜ್ಯಮಟ್ಟದ ಮಿಲನ್ಸ್ ಕಪ್ ಫುಟ್ಬಾಲ್ ಪಂದ್ಯಾಟ ನಡೆಯಲಿದೆ.

ರಾಜ್ಯದ ವಿವಿಧೆಡೆಯ ಸುಮಾರು 32 ತಂಡಗಳು ಭಾಗವಹಿಸಲಿದೆ. ಬೆಳಿಗ್ಗೆ 10 ಗಂಟೆಗೆ ಕೊಡಗು ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರು ಉದ್ಘಾಟಿಸಲಿದ್ದು, ಮಿಲನ್ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಎಂ.ಎಂ. ಲಿಜೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ, ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಐನಂಡ ಲಾಲ ಅಯ್ಯಣ್ಣ, ಕೆಡಿಎಫ್‍ಎ ಸದಸ್ಯ ಪಿ.ಕೆ. ಲೋಕೇಶ್, ಕಾರ್ಯದರ್ಶಿ ಟಿ.ಎಸ್. ಪೊನ್ನಪ್ಪ, ತಾ.ಪಂ. ಸದಸ್ಯ ಶೋಭಾ ಶ್ರೀನಿವಾಸ್, ಅಮ್ಮತ್ತಿ ಜಿಎಂಪಿ ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ಮತ್ತಿತರ ಪ್ರಮುಖರು ಆಗಮಿ ಸುವರು.

ಜ. 1 ರಂದು ಸಂಜೆ 4 ಗಂಟೆಗೆ ಕ್ಲಬ್‍ನ ಅಧ್ಯಕ್ಷ ಲಿಜೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಜಿ.ಪಂ. ಸದಸ್ಯ ವಿಜು ಸುಬ್ರಮಣಿ, ಕೆಎಫ್‍ಎ ಸದಸ್ಯ ಪಿ.ಕೆ. ಜಗದೀಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.