ಕೂಡಿಗೆ, ಡಿ. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಇವರ ಮಾರ್ಗದರ್ಶನದಲ್ಲಿ ಕೂಡಿಗೆ ವಲಯದ ಸ್ಥಳೀಯ ಸಂಘ -ಸಂಸ್ಥೆಗಳ ಸಹಕಾರದೊಂದಿಗೆ ಕೃಷಿ ವಿಚಾರ ಸಂಕಿರಣ ತಾ.26ರಂದು ಬೆಳಿಗ್ಗೆ 10 ಗಂಟೆಗೆ ಕೂಡ್ಲೂರಿನ ಕೆ.ಎಸ್ ರಾಜಾಚಾರ್ ಅವರ ಕೃಷಿ ಭೂಮಿಯಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಕೃಷಿಕ ಕೆ.ಎಸ್ ರಾಜಾಚಾರ್ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡುಮಂಗಳೂರಿನ ರಾಷ್ಟ್ರಪತಿ ಪದಕ ವಿಜೇತ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ ಪರಶಿವ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರದ ಸೋಮವಾರಪೇಟೆ ವಲಯ ಯೋಜನಾಧಿಕಾರಿ ಪ್ರಕಾಶ್ ವೈ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ ಅರುಣ್ ಕುಮಾರ್, ಸುಂದರ್ ನಗರದ ಪ್ರಗತಿಪರ ಕೃಷಿಕ ಜಯರಾಮ್ ಪಾಲ್ಗೊಳ್ಳುವರು.

ಸಂಪನ್ಮೂಲ ವ್ಯಕ್ತಿಗಳಾಗಿ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಮಂಡಳಿಯ ವಿಜ್ಞಾನಿಗಳಾದ ಡಾ. ವೆಂಕಟರಮಣಪ್ಪ, ಡಾ. ಮುರುಳೀಧರ್, ಕೂಡಿಗೆ ಕಾರ್ಪೋರೇಶನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಪಾಲ್ಗೊಳ್ಳುವರು.