ಸೋಮವಾರಪೇಟೆ,ಡಿ.21: ಮುಂಬೈನ ಬಯೋಸ್ಟಾಡ್ ಇಂಡಿಯಾ ಹಾಗೂ ಸ್ಥಳೀಯ ಲಯನ್ಸ್ ಸಂಸ್ಥೆಯ ವತಿಯಿಂದ ಪ್ರಗತಿಪರ ಮಹಿಳಾ ವೇದಿಕೆಯಲ್ಲಿ ತಾ. 23ರಂದು ಕಾಫಿ ಬೆಳೆಗಾರರಿಗೆ ಮಾಹಿತಿ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಚೌಟ ತಿಳಿಸಿದ್ದಾರೆ.
ಸಂಜೆ 5-30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ.ಎಸ್. ಮಹೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಳಗುಂದ ಕಾಫಿ ತೋಟದ ವೀರೇಂದ್ರ ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಅಪ್ಪಂಗಳ ಭಾರತೀಯ ಸಂಬಾರ ಮಂಡಳಿಯ ವಿಜ್ಞಾನಿ ಡಾ.ಎಸ್.ಜೆ ಅಂಕೇಗೌಡ, ಮಣ್ಣು ಆರೋಗ್ಯ ತಜ್ಞ ಸಿದ್ದಾಪುರದ ಎ. ರಾಮರಾಜ್, ನೆಟಾಫಿಮ್ ಇರಿಗೇಷನ್ ಸಂಸ್ಥೆಯ ಪ್ರಮುಖರಾದ ಅಂಜನಪ್ಪ ಅವರುಗಳು ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.