ಮಡಿಕೇರಿ, ಜು. 15: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬೆಂಗಳೂರು ಬಿ.ಇ.ಎಲ್. ಕೊಡವ ಅಸೋಷಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ತಾ. 17 ರಂದು ಮಧ್ಯಾಹ್ನ 3.45 ಗಂಟೆಗೆ ಬೆಂಗಳೂರು ಜಾಲಹಳ್ಳಿ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ ಬಿ.ಇ.ಎಲ್. ನಲ್ಲಿ ಆಟ್-ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಬಿ.ಇ.ಎಲ್. ಕೊಡವ ಅಸೋಷಿಯೇಷನ್ ಮತ್ತು ಸುವರ್ಣ ಮಹೋತ್ಸವ ಆಚರಣಾ ಸಮಿತಿ ಮುಖ್ಯ ಸಂಚಾಲಕ ಕುಂಬೇರ ಸಿ. ಪೆಮ್ಮಯ್ಯ, ಬಿ.ಇ.ಎಲ್. ಕೊಡವ ಅಸೋಸಿಯೇಷನ್ ಅಧ್ಯಕ್ಷ ಜೇಮಿರ ಸಿ. ಮುತ್ತಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.