ನಾಪೆÇೀಕ್ಲು, ಜು. 15: ನಾಲ್ಕುನಾಡು ವ್ಯಾಪ್ತಿಯಲ್ಲಿ ಕಳೆದ 20 ದಿನಗಳಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ ಕಾಫಿ ಫಸಲು ಸಂಪೂರ್ಣ ನೆಲಕಚ್ಚಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗಗಳಲ್ಲಿ ಕಾಫಿ ಹೂ ಮಳೆಯ ಕೊರತೆಯಿಂದ ಫಸಲು ತೀರಾ ಕಡಿಮೆಯಿದೆ ಎನ್ನುತ್ತಾರೆ ಬೆಳೆಗಾರರು.

ಮಳೆ ಕಡಿಮೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ತೀರಾ ಕಡಿಮೆ. ಕಳೆದ ವರ್ಷ ಯವಕಪಾಡಿ ಗ್ರಾಮದ ಕೈಕಂಬಕ್ಕೆ ಜು. 12ಕ್ಕೆ 79 ಇಂಚು ಮಳೆಯಾಗಿದ್ದರೆ, ಈ ವರ್ಷ 59.5 ಇಂಚು ಮಳೆ ಮಾತ್ರ ಸುರಿದಿದೆ. ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆ ವಿಭಾಗಕ್ಕೆ ಕಳೆದ ಬಾರಿ 93 ಇಂಚು. ಈ ವರ್ಷ 71 ಇಂಚು. ಪುಲಿಕೋಟು ಗ್ರಾಮಕ್ಕೆ ಕಳೆದ ವರ್ಷ 68 ಇಂಚು ಮಳೆಯಾಗಿದ್ದರೆ, ಪ್ರಸ್ತುತ 63 ಇಂಚು ಮಳೆ ಸುರಿದಿದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯ ಕಾರಣ ಕಾಫಿ ಫಸಲು ನಷ್ಟಗೊಳ್ಳುತ್ತದೆ ಎನ್ನುತ್ತಿದ್ದರು ಬೆಳೆಗಾರರು. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಮಳೆ ಪ್ರಮಾಣ ಕಡಿಮೆಯಿರುವ ಕಾರಣ ತುಸು ನೆಮ್ಮದಿಯಲ್ಲಿದ್ದರು. ಆದರೆ ಮಳೆ ಕಡಿಮೆ ಸುರಿದರು ಕಾಫಿ ಉದುರುತ್ತಿರುವದು ಅತಿಯಾಗಿ ಕಂಡುಬರುತ್ತಿರುವದರಿಂದ ಮತ್ತೆ ಅವರನ್ನು ಚಿಂತೆಗೊಳಗಾಗುವಂತೆ ಮಾಡಿದೆ. ಕಳೆದ ಬಾರಿಯ ಕಾಫಿ ಹಾಗೂ ಕಾಳುಮೆಣಸು ಫಸಲು ಕೊರತೆಯಿಂದ ಕಂಗೆಟ್ಟಿದ್ದ ಬೆಳೆಗಾರರಿಗೆ ಈಗ ಕಾಫಿ ಫಸಲು ನಷ್ಟಗೊಳ್ಳುತ್ತಿರುವದು ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಂತಾಗಿದೆ. ಮಳೆ ಕಡಿಮೆಗೊಂಡು ಬಿಸಿಲಿನ ವಾತಾವರಣ ಮೂಡಿದರೆ ಫಸಲು ಉದುರುವಿಕೆ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ಬೆಳೆಗಾರರು. ಕಾಫಿ ಹೂವು ಬರಲು ನೀರು ಹಾಯಿಸಿದ ಬೆಳೆಗಾರರ ತೋಟದಲ್ಲಿ ಕಾಫಿ ಕಾಯಿ ಹೆಚ್ಚಿನ ಗಾತ್ರ ಹೊಂದಿದ್ದು ಹೆಚ್ಚಿನ ನಷ್ಟಕ್ಕೆ ತುತ್ತಾಗಿದೆ.

ರಭಸದ ಗಾಳಿ

ಬೆಟ್ಟ ಪ್ರದೇಶಕ್ಕೆ ಹೊಂದಿ ಕೊಂಡಂತ್ತಿರುವ ನಾಲಡಿ, ಯವಕ ಪಾಡಿ, ಕುಂಜಿಲ, ಮರಂದೋಡ, ನೆಲಜಿ, ಪೇರೂರು, ಪುಲಿಕೋಟು ಗ್ರಾಮಗಳಲ್ಲಿ ಬೆಟ್ಟದಿಂದ ಬೀಸುವ ರಭಸದ ಗಾಳಿಯ ಪರಿಣಾಮ ಕಾಫಿ ಗಿಡಗಳ ರೆಂಬೆ ಮುರಿದು ಬಿದ್ದಿರುವದ ರೊಂದಿಗೆ, ಕೊಂಬೆಗಳು ಒಂದಕ್ಕೊಂದು ಸ್ಪರ್ಶಗೊಂಡು ಹೆಚ್ಚಿನ ಫಸಲು ನಷ್ಟ ಸಂಭವಿಸಿದೆ. ಕೊಳಕೇರಿ, ನಾಪೆÇೀಕ್ಲು, ಚೋನಕೆರೆ, ಎಮ್ಮೆಮಾಡು ಗ್ರಾಮಗಳಲ್ಲಿಯೂ ಕಾಫಿ ಫಸಲು ಉದುರುತ್ತಿರುವ ಬಗ್ಗೆ ಬೆಳೆಗಾರರು ಆತಂಕವ್ಯಕ್ತಪಡಿಸಿದ್ದಾರೆ.

ಸೂರ್ಯನ ದರ್ಶನವಾಗಿಲ್ಲ

ಕಳೆದ 20 ದಿನಗಳಿಂದ ಇಲ್ಲಿನ ಜನಕ್ಕೆ ಸೂರ್ಯನ ದರ್ಶನ ಭಾಗ್ಯ ಲಭಿಸಲಿಲ್ಲ. ಮೋಡ ಮುಸುಕಿದ ವಾತಾವರಣ ಮತ್ತು ಮಳೆಯ ಕಾರಣ ಕಾಫಿ ಗಿಡಗಳಲ್ಲಿ ತೇವಾಂಶ ಹೆಚ್ಚಾಗಿ ಕೊಳೆರೋಗದ ಭೀತಿಯೂ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ. ಹಿಂದೆ ಕೊಳೆ ರೋಗ ದಿಂದ ಕಾಳುಮೆಣಸು ಬಳ್ಳಿಗಳು ಸಂಪೂರ್ಣ ನಾಶಗೊಂಡಿದೆ. ಇದೇ ಹವಾಮಾನ ಮುಂದುವರಿದರೆ ಅಳಿದುಳಿದ ಕಾಳುಮೆಣಸು ಬಳ್ಳಿಗಳು, ಕಾಫಿ ಮತ್ತು ಅಂತರ್ ಬೆಳೆಯಾಗಿ ಬೆಳೆಯಲಾಗುತ್ತಿರುವ ಕಾವೇರಿ ಕಾಫಿ ಕೂಡ ನಷ್ಟಗೊಳ್ಳಲಿದೆ ಎನ್ನುತ್ತಾರೆ ಬೆಳೆಗಾರರು.

ಬೆಳೆಗಾರರನ್ನು ಮರೆತ ಕಾಫಿ ಮಂಡಳಿ

ಕಾಫಿ ಬೆಳೆಯನ್ನು ಪೆÇ್ರೀತ್ಸಾಹಿ ಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಕಾಫಿ ಕಣ, ಕೆರೆ, ಕೊಳವೆ ಬಾವಿ, ಗೋದಾಮು ನಿರ್ಮಾಣಕ್ಕೆ ಸಹಾಯ ಧನ ನೀಡುತ್ತಾ ಬಂದಿತ್ತು. ಆದರೆ ಇದರ ಭರವಸೆಯಲ್ಲಿ ಬೆಳೆಗಾರರು ಸಾಲ ಮಾಡಿ ಕೈಗೊಂಡ ಕಾಮಗಾರಿ ಗಳಿಗೆ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ರಿಯಾಯಿತಿ ಹಣ ದೊರೆತಿಲ್ಲ. ಕಾಫಿ ಮಂಡಳಿಯಲ್ಲಿ ಈ ಬಗ್ಗೆ ವಿಚಾರಿಸಿದರೆ ಸರಕಾರದಿಂದ ಹಣ ಬಂದಿಲ್ಲ. ಬಂದ ಕೂಡಲೇ ನೀಡುವದಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಕಕ್ಕಬೆ ಫಾರ್ಮರ್ಸ್ ಕ್ಲಬ್ ಕಾಫಿ ಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಪತ್ರ ಕಳುಹಿಸಿದ್ದಾಗಿ ತಿಳಿದು ಬಂದಿದೆ. ಏನೇ ಆದರೂ ಕಾಫಿ ಮಂಡಳಿ ಕೂಡಲೇ ಸಬ್ಸಿಡಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.

ರೈನ್ ರಾಯಲ್ಟಿ (ಮಳೆ ರಾಜಧನ) ನೀಡಲು ಒತ್ತಾಯ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿ ವರ್ಷದ ಕಾಫಿ ಫಸಲಿನಲ್ಲಿ ನಷ್ಟ ಉಂಟಾಗುತ್ತಿದೆ. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪುಡಿಗಾಸಿನ ಪರಿಹಾರದಿಂದ ಏನು ಪ್ರಯೋಜನವಿಲ್ಲ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವ ಟಾಟಾ ಕಾಫಿ ಸಂಸ್ಥೆಗೆ ಪ್ರತೀ ವರ್ಷ ರೈನ್ ರಾಯಲ್ಟಿ ನೀಡಲಾಗುತ್ತಿದೆ. ಆದುದರಿಂದ ಪಶ್ಚಿಮ ಘಟ್ಟ ಪ್ರದೇಶದ ಕಾಫಿ ಬೆಳೆಗಾರರಿಗೂ ಈ ಸೌಲಭ್ಯವನ್ನು ಒದಗಿಸಲು ಜನಪ್ರತಿ ನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.