ಕೂಡಿಗೆ, ನ. 28: ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯಲ್ಲಿ ಸೋರಿಕೆ ನೀರು ಹರಿಯುತ್ತಿದ್ದು, ಆ ನೀರನ್ನು ಎಡದಂಡೆಯ ನಾಲೆಯ ಮೂಲಕ ಕೊಡಗಿನ ಗಡಿಭಾಗ ಶಿರಂಗಾಲದ ಗೇಟಿನವರೆಗೆ ಹರಿಸಬೇಕೆಂದು ಆಗ್ರಹಿಸಿ ಹಾರಂಗಿ ಮಹಾಮಂಡಲ, ಹೆಬ್ಬಾಲೆ, ತೊರೆನೂರು, ಶಿರಂಗಾಲ ನೀರುಬಳಕೆ ದಾರರ ಸಂಘದ ವತಿಯಿಂದ ಹಾಗೂ ನಿರ್ದೇಶಕರು ಸೇರಿದಂತೆ ಈ ವ್ಯಾಪ್ತಿಯ ನೂರಾರು ರೈತ ಮುಖಂಡರು ಹಾರಂಗಿ ಅಣೆಕಟ್ಟೆ ಎದುರು ಪ್ರತಿಭಟನೆ ನಡೆಸಿದರು.ಹಾರಂಗಿ ಬಲದಂಡೆ ನಾಲೆಯಲ್ಲಿ ಸೋರಿಕೆ ನೀರು ಹೋಗುತ್ತಿರುವದನ್ನು ತಡೆಗಟ್ಟಿ ಎಡದಂಡೆಯಲ್ಲಿ ಹರಿಸುವ ಮೂಲಕ ದನ-ಕರುಗಳಿಗೆ ಕುಡಿಯಲು ನೀರು ಹಾಗೂ ಇಂದು ಮತ್ತು ನಾಳೆ ಹೆಬ್ಬಾಲೆಯಲ್ಲಿ ನಡೆಯುವ ಬನಶಂಕರಿ ಅಮ್ಮನ ಜಾತ್ರೋತ್ಸವಕ್ಕೆ ಅನುಕೂಲ ವಾಗುವಂತೆ ಸೋರಿಕೆ ನೀರನ್ನು ಹರಿಸಬೇಕೆಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭ ಹಾರಂಗಿ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ ಮಾತನಾಡಿ, ಹಾರಂಗಿ ಅಣೆಕಟ್ಟೆಯಲ್ಲಿ ರುವ ಸ್ಪಲ್ಪ ಪ್ರಮಾಣದ ನೀರನ್ನು ವಿದ್ಯುತ್ ಘಟಕದ ಮೂಲಕ ರಾತ್ರಿ ವೇಳೆಯಲ್ಲಿ ಹೊಳೆಗೆ ಹರಿಸುತ್ತಿರುವ ದನ್ನು ನೀರು ಬಳಕೆದಾರರ ಸಂಘ ಹಾಗೂ ಹಾರಂಗಿ ಮಹಾಮಂಡಲ ಖಂಡಿಸುತ್ತದೆ. ಸರಕಾರದ ನಿಯಮ ವನ್ನು ಉಲ್ಲಂಘಿಸುತ್ತಿಲ್ಲ. ಆದರೆ, ಸೋರಿಕೆ ನೀರು ಸಣ್ಣ ಪ್ರಮಾಣದಲ್ಲಿ ಎಡ ಮತ್ತು ಬಲ ದಂಡೆಗಳಲ್ಲಿ ಹರಿಯುತ್ತಿರುವದರಿಂದ ಇದನ್ನು ತಡೆಗಟ್ಟಿ ಎಡಬದಿಯ ನಾಲೆ ಶಿರಂಗಾಲದವರೆಗೆ ಹರಿಸಿದ್ದಲ್ಲಿ ಈ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗು ವದು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಅದಕ್ಕೆ ಸ್ಪಂದಿಸದ ಪರಿಣಾಮ ಪ್ರತಿಭಟನೆ ನಡೆಸುತ್ತಿರುವದಾಗಿ ಸ್ಥಳಕ್ಕಾಗಮಿಸಿದ ಇಂಜಿನಿಯರ್ ಚಂದ್ರಕುಮಾರ್ ಮಹಾಮಂಡಲದ ಅಧ್ಯಕ್ಷರು ಹಾಗೂ ನೀರು ಬಳಕೆದಾರರ ಸಂಘದ ಅಧ್ಯಕ್ಷರೊಡನೆ ಸುಧೀರ್ಘವಾಗಿ ಮಾತುಕತೆ ನಡೆಸಿ, ರೈತರು ಉಗ್ರ ಪ್ರತಿಭಟನೆಗೆ ಸಿದ್ದರಾಗುವ ಹಂತದಲ್ಲಿ ದ್ದಾಗ ಅಧಿಕಾರಿ ಚಂದ್ರಕುಮಾರ್ ಮೌಖಿಕವಾಗಿ ಸೋರಿಕೆಯ ನೀರನ್ನು ಶಿರಂಗಾಲದ ವರೆಗೆ ಹರಿಸಲು ಒಪ್ಪಿದರು. ಆನಂತರ ಪ್ರತಿಭಟನಾ ಕಾರರು ಪ್ರತಿಭಟನೆಯನ್ನು ನಿಲ್ಲಿಸಿದರು.
ಈ ಸಂದರ್ಭ ಹೆಬ್ಬಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ದಿನೇಶ್, ತೊರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಾಚಲ, ಶಿರಂಗಾಲ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಪಿ. ರಾಜು, ಸೇರಿದಂತೆ ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ್, ಗ್ರಾಮದ ಪ್ರಮುಖರು ಗಳಾದ ಟಿ.ಕೆ. ಪಾಂಡುರಂಗ, ಶಿವಣ್ಣ, ಶಿವಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರು ಪಾಲ್ಗೊಂಡಿದ್ದರು.
ಕಾರ್ಯಪಾಲಕ ಅಭಿಯಂತರÀ ರಂಗಸ್ವಾಮಿ, ಸಹಾಯಕ ಅಭಿಯಂತರ ನಾಗರಾಜ್ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.