ಗೋಣಿಕೊಪ್ಪಲು, ಸೆ. 28: ದಸರಾ ದಿನದಂದು ದಸರಾ ನಾಡ ಹಬ್ಬ ಸಮಿತಿ ವತಿಯಿಂದ ಸ್ತಬ್ಧಚಿತ್ರ ಮೆರವಣಿಗೆ ನಡೆಯಲಿದೆ ಎಂದು ದಸರಾ ನಾಡ ಹಬ್ಬ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ರಿಶಿ ಕಾವೇರಪ್ಪ ತಿಳಿಸಿದ್ದಾರೆ. 28 ನೇ ವರ್ಷದ ಈ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಈ ಬಾರಿ ಹೆಚ್ಚಿನ ಚಿತ್ರಗಳನ್ನು ನಿರೀಕ್ಷಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ವಿಷಯದ ಬಗ್ಗೆ ಚಿತ್ರವನ್ನು ಅನಾವರಣಗೊಳಿಸಬಹುದು. ಉತ್ತಮ ಚಿತ್ರಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು ಎಂದರು.
ಸ್ತಬ್ಧಚಿತ್ರ ಪ್ರದರ್ಶನ ಸಂದರ್ಭ ಇನ್ನಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವದು. ಪ್ರದರ್ಶನದೊಂದಿಗೆ ಗೊಂಬೆ ಕುಣಿತ, ಮೈಲಾರಿ, ಹುಲಿವೇಶ ಹಾಗೂ ವೀರಗಾಸೆ ಕುಣಿತದೊಂದಿಗೆ ಆರ್ಎಂಸಿ ಆವರಣದಿಂದ ರಸ್ತೆಯುದ್ದಕ್ಕೂ ಕಲಾ ಪ್ರದರ್ಶನ ನಡೆಸಲಾಗುವದು.
ಅಂದು ಮಧ್ಯಾಹ್ನ 12 ಗಂಟೆಗೆ ಅನ್ನದಾನ, 2 ಗಂಟೆಗೆ ಮೆರವಣಿಗೆ ನಡೆಯಲಿದೆ. ಭಾಗವಹಿಸುವವರು 12 ಗಂಟೆಗೆ ಆರ್ಎಂಸಿ ಆವರಣದಲ್ಲಿ ಜಮಾಯಿಸಬೇಕಿದೆ. ಹೆಚ್ಚಿನ ಮಾಹಿತಿಗೆ 9480180541, 9449813300 ಸಂಪರ್ಕಿಸಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಂಜಿತಂಡ ಪ್ರವೀಣ್, ಖಜಾಂಚಿ ದಿಲೀಪ್, ಗೌರವ ಅಧ್ಯಕ್ಷ ಮನೋಜ್ ಹಾಗೂ ಸದಸ್ಯ ಚೋನೀರ ಪೊನ್ನಪ್ಪ ಉಪಸ್ಥಿತರಿದ್ದರು.