ಮಡಿಕೇರಿ, ಅ. 15: ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ರಿಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿದ ಒಂದು ವರ್ಷದ ಬಳಿಕ ಅರಣ್ಯ ಕಾಯ್ದೆಯನ್ವಯ ಅನುಮತಿ ನೀಡಿದ್ದು ಅಸಿಂಧು ಎಂದು ನ್ಯಾಯಾಲಯದಲ್ಲಿ ತೀರ್ಪು ಹೊರ ಬಂದಾಗ ಹಲವು ವರ್ಷಗಳ ಕಾನೂನು ಸಮರದಲ್ಲಿ ರಾಜ್ಯ ಸರಕಾರ ಸೋಲು ಅನುಭವಿಸಿದೆ. ಇದೀಗ ರಾಜ್ಯ ಸರಕಾರ ರಿಸಾರ್ಟ್ ಮಾಲೀಕರಿಗೆ ರೂ.23 ಕೋಟಿ ಗೂ ಅಧಿಕ ಹಣ ಪರಿÀಹಾರ ನೀಡಿದೆ. ಸರಕಾರ ಅನಿವಾರ್ಯವಾಗಿ ಈ ಹಣವನ್ನು ಪಾವತಿಸಲು ಮಡಿಕೇರಿಯ ನ್ಯಾಯಾಲಯದಲ್ಲಿ ಠೇವಣಿ ಇರಿಸಿದೆ.
ನಾಗರಹೊಳೆ ಅಭಯಾರಣ್ಯ ಪ್ರದೇಶದ ಮೂರ್ಕಲ್ಲುವಿನಲ್ಲಿ 1994 ರಲ್ಲಿ ವನ್ಯಜೀವಿ ತಾಣದಲ್ಲಿ ತಂಗಲು ರಿಸಾರ್ಟ್ ನಿರ್ಮಿಸಲು ಅರಣ್ಯ ಇಲಾಖೆ ಜಾಗವನ್ನು ಗೇಣಿ ಆಧಾರದಲ್ಲಿ ಗೇಟ್ ವೇ ಹೊಟೇಲ್ಸ್ ಮತ್ತು ಗೇಟ್ ವೇ ರಿಸಾಟ್ರ್ಸ್ ಗೆ ಅನುಮತಿ ನೀಡಿತ್ತು. 18 ವರ್ಷಗಳ ವರೆÀಗೆ ಗುತ್ತಿಗೆ ನೀಡಲಾಗಿತ್ತು. ಇದಕ್ಕಾಗಿ ಕಂಪೆನಿಯು ರೂ. 424 ಲಕ್ಷ ಹಣವನ್ನು ತಾ. 25-6-94 ರಂದು ಅರಣ್ಯ ಇಲಾಖೆಗೆ ಪಾವತಿಸಿತ್ತು. ಆದರೆ, ಆ ಬಳಿಕ ಕೆಲವು ಪರಿಸರವಾದಿಗಳು ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ವನ್ಯಜೀವಿ ಪ್ರದೇಶÀದಲ್ಲಿ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದರು.
ಈ ಸಂಬಂಧ ಮಡಿಕೇರಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅನುಮತಿ ನೀಡಿಕೆ ಅರಣ್ಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗೇಟ್ ವೇ ಲಿಮಿಟೆಡ್ ಮಾಲೀಕರಿಗೆ 1996 ರಲ್ಲಿ ನೊಟೀಸ್ ಜಾರಿಗೊಳಿಸಿ ಜಾಗ ಗೇಣಿಗೆ ನೀಡಿದ್ದನ್ನು ರದ್ದುಗೊಳಿಸುವ ಸೂಚನೆ ನೀಡಿತ್ತು. ಇದರಿಂದ ಆಘಾತಕ್ಕೊಳ ಗಾದ ಕಂಪೆನಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತು. ಅನುಮತಿ ಯಿದ್ದೇ ಕೆಲಸ ನಿರ್ವಹಿಸಲಾಗಿದೆ. ಅಲ್ಲದೆ ಕಂಪೆನಿಯ ಗುತ್ತಿಗೆ ಹಣ ಪಾವತಿಯೊಂದಿಗೆ 12 ಕಾಟೇಜ್ ಗಳನ್ನು ಕೂಡ ನಿರ್ಮಾಣ ಮಾಡಿದ್ದು ಇದರಿಂದ ತೀವ್ರ ನಷ್ಟವುಂಟಾಗಿದ್ದು ನ್ಯಾಯ ದೊರಕಿಸುವಂತೆ ವಕೀಲರ ಮೂಲಕ ಮನವಿ ಸಲ್ಲಸಿತ್ತು.