ವೀರಾಜಪೇಟೆ, ಅ. 30: ಕಾಕೋಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಇವರ ಆಶ್ರಯಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಚಾರ್ಮರ್ಸ್, ಟವರ್ಸ್, ವೀರಾಜಪೇಟೆ ಕೊಡವ ಸಮಾಜ, ಹಾಗೂ ಹಾತೂರು ತಂಡಗಳು ಸೆಮಿಫೈನಲ್ಸ್ ತಲುಪಿದೆ.

ಮಡಿಕೇರಿಯ ಚಾರ್ಮರ್ಸ್ ತಂಡವು 6-2 ಗೋಲುಗಳಿಂದ ಬೇತು ಸ್ಪೋಟ್ಸ್ ಕ್ಲಬ್ ತಂಡವನ್ನು ಮಣಿಸಿತು. ಚಾರ್ಮಸ್ ಪರ ಕೀರ್ತಿ ಶಂಕರ್ (3,24,25ನಿ), ಜೀವನ್ ಕುಮಾರ್ (4ನಿ,) ಕರಣ್ ಕಾಳಪ್ಪ (16ನಿ), ಅಲನ್ ದೇವಯ್ಯ (50ನಿ), ಪರಾಜಿತ ತಂಡದ ಪರ ಶೇಷಗೌಡ (14ನಿ), ಲಿತಿನ್ (33ನಿ) ದಲ್ಲಿ ಗೋಲು ದಾಖಲಿಸಿದರು.

ವೀರಾಜಪೇಟೆಯ ಟವರ್ಸ್ ತಂಡವು 7-6 ಗೋಲುಗಳಿಂದ ಯುಎಸ್‍ಸಿ ರೆಡ್ ಬೇರಳಿ ನಾಡು ತಂಡವನ್ನು ಸಡನ್ ಡೆತ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲೂ ಸಮಬಲ ಸಾಧಿಸಿದ ಪರಿಣಾಮ ಸಡನ್‍ಡೆತ್‍ನಲ್ಲಿ ಟವರ್ಸ್ ತಂಡ ವಿಜಯಿಯಾದರು. ಟವರ್ಸ್ ಪರ ರಾಹೀಲ್ (8ನಿ), ಶವಾಝ್ (51ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಚಿಂಗಪ್ಪ, ರಾಹೀಲ್, ಬೋಪಣ್ಣ, ರಫೀಕ್ ಸಡನ್‍ಡೆತ್ ನಲ್ಲಿ ರಫೀಕ್ ಗೋಲು ದಾಖಲಿಸಿದರು. ಯುಎಸ್‍ಸಿ ರೆಡ್ ಬೇರಳಿನಾಡು ಪರ ಬೋಪಣ್ಣ (47ನಿ), ಇಷಾದ್ (43ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಕೃಷ್ಣ ಪಾಟೀಲ್, ಕಲ್ಯಾಣ್ ಬೇಂಗ್ರ, ವಿಜಯ್, ಬೋಪಣ್ಣ ಗೋಲು ದಾಖಲಿಸಿದರು.

ವೀರಾಜಪೇಟೆ ಕೊಡವ ಸಮಾಜ ತಂಡವು 5-4 ಗೋಲುಗಳಿಂದ ಸೋಮವಾರಪೇಟೆಯ ಡಾಲ್ಫಿನ್ಸ್ ತಂಡವನ್ನು ಪರಾಭವಗೊಳಿಸಿತು. ಕೊಡವ ಸಮಾಜದ ಪರ ಗಣಪತಿ (3,44ನಿ), ಆಕಾಶ್ ಹಜಾರೆ (16,18ನಿ), ಗಿರಿಧರ್ (42ನಿ), ಡಾಲ್ಫಿನ್ಸ್ ಪರ ರಮೇಶ್ (4,32ನಿ), ಮಣಿಕಂಠ (41ನಿ), ಭರತ್ (53ನಿ)ದಲ್ಲಿ ಗೋಲು ಬಾರಿಸಿದರು.

ಹಾತೂರು ಸ್ಪೋಟ್ಸ್ ತಂಡವು 3-1 ಗೋಲುಗಳಿಂದ ಆತಿಥೇಯ ಎಸ್‍ಆರ್‍ಸಿ ತಂಡವನ್ನು ಪರಾಭವಗೊಳಿಸಿತು. ಹಾತೂರು ಪರ ಮುದ್ದಪ್ಪ (5,9ನಿ), ಅಪ್ಪಚ್ಚು (49ನಿ), ಎಸ್ ಆರ್ ಸಿ ಪರ ತ್ಯಾಗರಾಜ್ (20ನಿ) ದಲ್ಲಿ ಬಾರಿಸಿದ ಏಕೈಕ ಗೋಲಿನಿಂದ ಗೋಲಿನ ಅಂತರವನ್ನು ಕಡಿಮೆ ಮಾಡಿಕೊಂಡರು.

ತೀರ್ಪುಗಾರರಾಗಿ ಐನಂಡ ಲಾಲ ಅಯ್ಯಣ್ಣ, ಕೊಕ್ಕಂಡ ರೋಷನ್, ನೆಲ್ಲಮಕ್ಕಡ ಪವನ್, ಮೂಕಚಂಡ ನಾಚಪ್ಪ, ಚೋಯಮಾಡಂಡ ಚಂಗಪ್ಪ, ತಾಂತ್ರಿಕ ಸಮಿತಿಯಲ್ಲಿ ಅರುಣ್, ಬೋಪಣ್ಣ, ನೆರಪಂಡ ಭಾಗ್ಯಶ್ರೀ ಮಳವಂಡ ಅಯ್ಯಪ್ಪ ಕಾರ್ಯ ನಿರ್ವಹಿಸಿದರು.