ಮಡಿಕೇರಿ, ನ. 2: ನಮ್ಮ ನಾಡಿನಲ್ಲಿ ಕನ್ನಡಿಗರಾದ ನಾವುಗಳೇ ಅಪರಿಚಿತರಾಗುವ ಸನ್ನಿವೇಶ ವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ಆತಂಕ ವ್ಯಕ್ತ ಪಡಿಸಿದರು.
ಪೊನ್ನಂಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕ, ಪೊನ್ನಂಪೇಟೆ ಹೋಬಳಿ ಸಮಿತಿಯಿಂದ ಆಯೋಜನೆಗೊಂಡಿದ್ದ 60ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತನಾಡಿದರು. ಕರವೇ ಸಂಘಟನೆಯು ಕನ್ನಡದ ಉಳಿವಿಗಾಗಿ ಹೋರಾಡುತ್ತಿರುವದು ಶ್ಲಾಘನೀಯ ಎಂದ ಅವರು, ಕರ್ನಾಟಕದ ಕವಿಗಳಿಗೆ ಬಹುಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ಬಂದ ಹೆಗ್ಗಳಿಕೆ ಇದೆ. ಪೋಷಕರಲ್ಲಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುವ ವ್ಯಾಮೋಹ ಕಡಿಮೆಯಾಗಬೇಕು, ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಆಗಬೇಕು. ಮಾತೃ ಭಾಷೆಗೆ ಜೀವ ಶಕ್ತಿ ಕೊಡಲು ಅಂದು ಮಹಾತ್ಮ ಗಾಂಧೀಜಿಯೇ ಹೇಳಿದರು. ಎಂದು ನೆನಪಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಕರವೇಯ ಜಿಲ್ಲಾ ಅಧÀ್ಯಕ್ಷ ವೆಂಕಟೇಶ್ ಪೂಜಾರಿ ಕನ್ನಡ ನಾಡು, ನುಡಿ, ನೆಲ,ಜಲಕ್ಕಾಗಿ ಕರವೇಯ ಕಾರ್ಯಕರ್ತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಗಡಿಭಾಗ ಬೆಳಗಾವಿಯಲ್ಲಿ ಹೋರಾಟ ಮಾಡಿದ ತರುವಾಯ ನ್ಯಾಯ ಸಿಕ್ಕಿದೆ. ಈಗಿನ ಸರ್ಕಾರದ ವ್ಯವಸ್ಥೆಯಲ್ಲಿ ನಾವುಗಳು ಗುಲಾಮರಾಗಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದರು. ಕರವೇಯ ರಾಜ್ಯಾಧ್ಯಕ್ಷ ನಾರಾಯಣಗೌಡರು ತಮಗೆ ಸಿಕ್ಕಿದ ಉಡುಗೊರೆಯನ್ನು ಹರಾಜು ಮಾಡಿ ಅದರಲ್ಲಿ ಬಂದ ಹಣವನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ವಿತರಿಸಿದ್ದಾರೆ. ಎಂದ ಅವರು ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆಯಲ್ಲಿ ಜನತೆಗೆ ಸ್ಮಶಾನ ಸಮಸ್ಯೆಯನ್ನು ಕರವೇ ಬಗೆಹರಿಸಿ ನ್ಯಾಯ ಒದಗಿಸಿದ್ದೇವೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಅಶೋಕ ಬಿ. ದಿವಟರ ಮಾತನಾಡಿ ಕನ್ನಡ ನಾಡು ನುಡಿ, ನೆಲ, ಜಲಕ್ಕಾಗಿ ಹೋರಾಟ ಅನಿವಾರ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಕರವೇಯ ಪೊನ್ನಂಪೇಟೆ ಅಧ್ಯಕ್ಷರಾದ ಟಿ.ಎಸ್. ಪುಟ್ಟಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಗಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ, ಉಪಾಧ್ಯಕ್ಷೆ ಮಂಜುಳಾ ಸುರೇಶ್,ಕರವೇಯ ಕಾನೂನು ಸಲಹೆಗಾರ ವಿ.ಜಿ. ಮಂಜುನಾಥ್ ಸೇರಿದಂತೆ ಕರವೇಯ ಪಧಾಧಿಕಾರಿಗಳಾದ ಪಂಕಜಾಕ್ಷಿ, ಜಯಮ್ಮ, ಸರೋಜ, ದಿಲೀಪ್, ಜಿಲ್ಲಾಕಾರ್ಯದರ್ಶಿ ಸತೀಶ್, ಕಾರ್ಯಕ್ರಮದ ವಿವಿಧ ಪ್ರಾÀ್ರಯೋಜಕÀ ವೆಂಕಟೇಶ್ ಬಸ್ ಮಾಲೀಕÀ ಪಿ.ಟಿ. ರಮೇಶ್ ಪೊನ್ನಂಪೇಟೆಯ ಕೆ.ರಾಜು, ಇ.ಹರೀಶ್ ಉಪಸ್ಥಿತರಿ ದ್ದರು. ಕಾರ್ಯಕ್ರಮದ ಅಂಗವಾಗಿ ಕರವೇಯಿಂದ ಸ್ಥಳೀಯ ಸಾಧಕರಾದ ಗ್ರಾ.ಪಂಯ ಹಿರಿಯ ಪೌರ ಕಾರ್ಮಿಕೆ ನಂಜಮ್ಮ, ಹಳ್ಳಿಗಟ್ಟುವಿನ ಸಮಾಜ ಸೇವಕರಾದ ಜಯರಾಮ್ ಸೋಮಾಯಾಜಿ, ದೇವರಪುರದ ಚೆಕ್ಕೇರ ಮನು, ಪೊನ್ನಂಪೇಟೆಯ ಚಂದ್ರಶೇಖರ್ ಹಾಗೂ ಟಿ.ಆರ್ ವಿನೋದ್ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸ್ಥಳೀಯ ಏಳನೇ, ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಗಳಾದ ಹೆಚ್.ಎಂ .ಗೀತಾಂಜಲಿ, ವಿ.ಪಿ.ಗೌತಮಿ, ಎಂ.ಎಸ್ ಚೇತನ್, ಎಂ.ಜಿ. ಯಶಿಕರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕನ್ನಡಾಂಭೆಯ ಮೆರವಣಿಗೆಗೆ ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್.ಜಯರಾಂ, ಕರವೇಯ ಗೌರವ ಅಧ್ಯಕ್ಷರಾದ ಬಿ,ಎಸ್. ಸುಂದರ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಾಗಾಸೆ,ಮೆರಗು ನೀಡಿದವು ನಾಡ ಗೀತೆಯನ್ನು ಎಸ್ಟಿ ಗಿರೀಶ್ ತಂಡ ನಡೆಸಿಕೊಟ್ಟವು ಸ್ವಾಗತವನ್ನು ಕರವೇಯ ಹೆಚ್.ಎಸ್. ಮಹೇಶ್ ಶಿವಕಾಲೋನಿ ನೆರವೇರಿಸಿದರು, ಕರವೇಯ ಪ್ರಧಾನ ಕಾರ್ಯದರ್ಶಿ ಪಿ.ಟಿ.ಸುರೇಶ್ ವರದಿ ವಾಚಿಸಿದರು. ಚಂದನ ಹಾಗೂ ಶಿವಪ್ರಸಾದ್ ನಿರೂಪಿಸಿದರು. ಕರವೇಯ ಕೆ.ಡಿ.ವಿನು ವಂದಿಸಿದರು, ಸ್ಥಳೀಯ ಕಲಾವಿದಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.