ಮಡಿಕೇರಿ, ಆ. 11: ಮಡಿಕೆÉೀರಿ ಯಲ್ಲಿ ‘ಬೀಫ್ ಸ್ಟಾಲ್’ ಆರಂಭಿಸುವ ಕನಸು ಹೊಂದಿರುವದಾಗಿ ತಾವು ಮಾಡಿರುವ ಭಾಷಣದ ತುಣುಕು ಗಳನ್ನು ವಾಟ್ಸ್‍ಅ್ಯಪ್ ಮೂಲಕ ನಗರಸಭೆÉಯ ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಪ್ರಚಾರ ಮಾಡುವ ಮೂಲಕ ಶಾಂತಿಪ್ರಿಯ ವಾದ ಕೊಡಗು ಜಿಲ್ಲೆಯಲ್ಲಿ ಕೋಮು ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿಯ ನಗರ ಘಟಕ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆÉಯ ಹಿರಿಯ ಸದಸ್ಯ ಪಿ.ಡಿ. ಪೊನ್ನಪ್ಪ, ವಾಟ್ಸ್‍ಅ್ಯಪ್ ಮೂಲಕ ಪ್ರಚೋದನಕಾರಿ ಸಂದೇಶ ರವಾನಿ ಸುತ್ತಿರುವದು ಖಂಡನೀಯವೆಂದರು. ಬಹುಸಂಖ್ಯಾತರು ಗೋವನ್ನು ಪೂಜನೀಯ ಭಾವನೆಯಿಂದ ನೋಡು ತ್ತಾರೆ. ಇತರ ಜಿಲ್ಲೆಗಳಲ್ಲಿ ಗೋಮಾಂಸ ಮಾರಾಟ ಮಾಡುವವರು ಮತ್ತು ಭಕ್ಷಿಸುವವರು ಇದ್ದರೂ ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಗೋ ಮಾಂಸದ ಮಾರಾಟಕ್ಕೆ ಅವಕಾಶವಿಲ್ಲ. ಆದರೆ, ಇತ್ತೀಚೆಗೆ ಎಸ್‍ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಗೋಮಾಂಸದ ಮಳಿಗೆ ಆರಂಭಿಸುವ ಹೇಳಿಕೆ ನೀಡಿರು ವದು ನಾಚಿಕೆಗೇಡಿನ ವಿಚಾರವಾಗಿದೆ. ಶೇ.85 ರಷ್ಟು ಮಂದಿ ಗೋಮಾಂಸ ಸೇವಿಸುತ್ತಾರೆ ಎಂದು ನೀಡಿರುವ ಹೇಳಿಕೆ ಖಂಡನೀಯ ವಾಗಿದ್ದು, ಶಾಂತಿಯುತ ಕೊಡಗನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಕೋಮು ಪ್ರಚೋದನೆ ನೀಡುತ್ತಿ ರುವ ಬಗ್ಗೆ ಎಸ್‍ಪಿಗೆ ಬಿಜೆಪಿ ವತಿಯಿಂದ ದೂರನ್ನು ನೀಡಲಾಗು ವದು ಎಂದು ತಿಳಿಸಿದ ಅವರು, ಯಾವದೇ ಕಾರಣಕ್ಕೂ ಗೋ ಮಾಂಸ ಮಾರಾಟಕ್ಕೆ ಅವಕಾಶ ನೀಡುವದಿಲ್ಲ ವೆಂದು ಪಿ.ಡಿ. ಪೊನ್ನಪ್ಪ ಎಚ್ಚರಿಕೆ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕೇರಳ ಮೂಲ ದಿಂದ ಬಂದಿರುವ ರಾಜಕೀಯ ಪಕ್ಷವೊಂದು ಜಿಲ್ಲೆಯಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಪ್ರಚಾರ ಗಿಟ್ಟಿಸಿಕೊಳ್ಳುವದ ಕ್ಕಾಗಿ ಗೋಮಾಂಸ ಮಳಿಗೆ ತೆರೆಯುವ ಬಗ್ಗೆ ಪ್ರಸ್ತಾಪಿಸಿರುವ ಸದಸ್ಯ ಅಮಿನ್ ಮೊಹಿಸಿನ್, ಸಂಘ ಪರಿವಾರ ಹಾಗೂ ಬಿಜೆಪಿಗೆ ಸವಾಲು ಹಾಕಿರುವದು ಖಂಡನೀಯವೆಂದರು.
ಬೀಫ್ ಸ್ಟಾಲ್ ತೆರೆಯುವದು ತಮ್ಮ ಕನಸೆಂದು ಹೇಳಿಕೊಂಡಿರು ವವರ ಕನಸು ಕನಸಾಗಿಯೆ ಉಳಿಯಲಿದೆ ಎಂದರು. ಕೇವಲ ನಗರಸಭಾ ಸದಸ್ಯರಾದರೆ ಸಾಲದು, ಈ ನೆಲದ ಕಾನೂನಿನ ಬಗ್ಗೆಯೂ ತಿಳುವಳಿಕೆ ಇರಬೇಕೆಂದು ತಿಳಿಸಿದ ಮಹೇಶ್ ಜೈನಿ, ಸದಸ್ಯ ಅಮಿನ್ ಮೊಹಿಸಿನ್‍ರನ್ನು ಬಂಧಿಸಿ ನಗರಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ವಸತಿ ಯೋಜನೆ ಲಾಭ ಪಡೆಯಿರಿ
ಎಲ್ಲರಿಗೂ ವಸತಿ ಸಿಗಬೇಕೆನ್ನುವ ಕೇಂದ್ರ ಸರ್ಕಾರದ ಯೋಜನೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕಾರ್ಯಗತವಾಗುತ್ತಿದ್ದು, ನಗರಸಭಾ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳುವಂತೆ ಪಿ.ಡಿ. ಪೊನ್ನಪ್ಪ ಇದೇ ಸಂದರ್ಭ ಮನವಿ ಮಾಡಿದರು. ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯ ಪಡೆಯಲು ಕೂಪನ್ ತೆಗೆದುಕೊಳ್ಳುವ ನಿಯಮವನ್ನು ಜಾರಿಗೆ ತಂದಿರುವದ ರಿಂದ ಜನ ಸಾಮಾನ್ಯರು ದಿನವಿಡೀ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು, ಈ ಕ್ರಮವನ್ನು ರಾಜ್ಯ ಸರ್ಕಾರ ತಕ್ಷಣ ಬದಲಾಯಿಸ ಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಕೆ.ಎಸ್. ರಮೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್, ಉಮೇಶ್ ಸುಬ್ರಮಣಿ ಹಾಗೂ ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಉಪಸ್ಥಿತರಿದ್ದರು.