ಮಡಿಕೇರಿ, ಸೆ. 16: ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವದು. ಈ ಹಿಂದೆಯೂ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದು, ಸದಸ್ಯರು, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುವದಾಗಿ ನಗರಸಭೆಯ ನೂತನ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಭರವಸೆಯಿತ್ತರು.

ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಪೂಜೆ ಸಲ್ಲಿಸುವದರೊಂದಿಗೆ ಇಂದು ಅಧಿಕಾರ ವಹಿಸಿಕೊಂಡ ಕಾವೇರಮ್ಮ ಅವರು ನಗರದ ಅಗತ್ಯತೆಗಳ ಬಗ್ಗೆ ತಮಗೆ ಅರಿವಿದೆ. ಜಿಲ್ಲಾ ಉಸ್ತುವಾರಿ ಸಚಿವ

ಎಂ.ಆರ್. ಸೀತಾರಾಮ್, ಎಂಎಲ್‍ಸಿ

(ಮೊದಲ ಪುಟದಿಂದ) ವೀಣಾ ಅಚ್ಚಯ್ಯ ಅವರುಗಳು ನಗರದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಇವರುಗಳ ಸಹಕಾರದೊಂದಿಗೆ ಜನರ ಅವಶ್ಯಕತೆಗಳನ್ನು ಈಡೇರಿಸಲು ಪ್ರಯತ್ನಿಸುವದಾಗಿ ಹೇಳಿದರು.

ಕುಡಿಯುವ ನೀರು, ಶುಚಿತ್ವಕ್ಕೆ ಆದ್ಯತೆ, ಮಾರುಕಟ್ಟೆ ಕಾಮಗಾರಿ, ಖಾಸಗಿ ಬಸ್ ನಿಲ್ದಾಣದಂತಹ ಕೆಲಸಗಳು ಆಗಬೇಕಾಗಿದ್ದು, ಈ ಬಗ್ಗೆ ಗಮನ ಹರಿಸುವದಾಗಿ ಹೇಳಿದ ಅವರು ದಸರಾ ಸಮೀಪಿಸುತ್ತಿದ್ದು, ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಿರು ವದಾಗಿ ತಿಳಿಸಿದರು. ದಸರಾಕ್ಕೆ ಅನುದಾನದೊಂದಿಗೆ ಅಭಿವೃದ್ಧಿ ಯೋಜನೆಗಳಿಗೆ ಸಚಿವರ ಮೂಲಕ ವಿಶೇಷ ಅನುದಾನಕ್ಕೂ ಪ್ರಯತ್ನಿಸುವ ದಾಗಿ ನೂತನ ಅಧ್ಯಕ್ಷರು ಹೇಳಿದರು.

ಉಪಾಧ್ಯಕ್ಷರು ಬೇರೆ ಪಕ್ಷದವರಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರೊಂದಿಗೂ ಹೊಂದಾಣಿಕೆಯೊಂದಿಗೆ ಅಭಿವೃದ್ಧಿಗೆ ತೊಡಕಾಗದಂತೆ ಕೆಲಸ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಈ ಹಿಂದಿನ ಅನುಭವದೊಂದಿಗೆ ಈ ಬಗ್ಗೆ ಧೈರ್ಯ ಹೊಂದಿರುವದಾಗಿ ನುಡಿದರು. ಕಾವೇರಮ್ಮ ಸೋಮಣ್ಣ ಅವರು ಮಡಿಕೇರಿ ನಗರಸಭೆಯಾಗಿ ಪರಿವರ್ತನೆಯಾದಾಗ 16.01.2004 ರಿಂದ 2.7.2004ರ ತನಕ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಧಿಕಾರ ಸ್ವೀಕಾರ ಸಂದರ್ಭ ನಗರ ಸಭೆಯ ಕಾಂಗ್ರೆಸ್‍ನ ಸದಸ್ಯರು ಗಳೊಂದಿಗೆ ಪಕ್ಷದ ಪ್ರಮುಖರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಕೆ.ಪಿ. ಚಂದ್ರಕಲಾ, ಸುರಯ್ಯ ಅಬ್ರಾರ್, ವಿ.ಪಿ. ಶಶಿಧರ್, ಅಂಬೆಕಲ್ ಕುಶಾಲಪ್ಪ, ಅಬ್ದುಲ್‍ರಜಾಕ್, ನೆರವಂಡ ಉಮೇಶ್, ಕುಮುದಾ ಧರ್ಮಪ್ಪ, ಕೆ.ಕೆ. ಮಂಜುನಾಥ್, ಕೆ.ಎಂ. ಲೋಕೇಶ್, ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ನಗರಸಭೆಯ ಹಲವು ಮಾಜಿ ಸದಸ್ಯರು, ಕಾಂಗ್ರೆಸ್‍ನ ಇತರ ಪದಾಧಿಕಾರಿಗಳು ಹಾಜರಿದ್ದರು. ವಿಜಯ ವಿನಾಯಕ ದೇವಾಲಯದ ಕೃಷ್ಣ ಉಪಾಧ್ಯ ಅವರು ಪೂಜೆ ನೆರವೇರಿಸಿದರು.

ನೂತನ ಅಧ್ಯಕ್ಷರನ್ನು ಅವರ ಅಭಿಮಾನಿಗಳು ಹೂಗುಚ್ಛ ನೀಡಿ ಅಭಿನಂದಿಸುತ್ತಿದ್ದ ಸಂದರ್ಭ ಅಧ್ಯಕ್ಷರ ಕಣ್ಣಲ್ಲಿ ಆನಂದ ಬಾಷ್ಪ ಕಂಡು ಬಂದಿತು.