ಗುಡ್ಡೆಹೊಸೂರು, ಸೆ. 24: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2015_16ನೇ ಸಾಲಿನಲ್ಲಿ ರೂ. 23.77 ಲಕ್ಷ ಲಾಭಗಳಿಸಿದೆ.

ಸಂಘದಲ್ಲಿ 1860 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ ರೂ. 122.46 ಲಕ್ಷ ಹೊಂದಿದೆ. 2015-16ನೇ ಸಾಲಿಗೆ ರೂ. 106.93 ಕೋಟಿ ವಹಿವಾಟು ನಡೆಸಿರುವ ಸಂಘ ರೂ. 7.23 ಲಕ್ಷಗಳ ಕ್ಷೇಮನಿಧಿಯನ್ನು, ರೂ. 126.97 ಇತರ ನಿಧಿಯನ್ನು, ರೂ. 1524.56 ಲಕ್ಷಗಳ ಠೇವಣಿಯನ್ನು ಹೊಂದಿದೆ. ಸಂಘ ವಿವಿಧ ರೀತಿಯ ಸಾಲಗಳನ್ನು ವಿತರಿಸುತ್ತಿದೆ.

ಕೆ.ಸಿ.ಸಿ. ಸಾಲ, ಮಧ್ಯಮಾವಧಿ ಸಾಲ, ಆಭರಣ ಸಾಲಗಳನ್ನು ಸಂಘದ ಸ್ವಂತ ಬಂಡವಾಳದಿಂದ ವಿತರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇ. 100 ರಷ್ಟು ಸಾಲ ವಸೂಲಾತಿಯಾಗಿದೆ.

ಸಂಘದ ಮೂಲಕ 106 ಸ್ವಸಹಾಯ ಸಂಘಗಳನ್ನು ರಚಿಸಿದ್ದು, 100 ಲಕ್ಷ ಠೇವಣಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ 2 ರೈತ ಕೂಟಗಳು ಕಾರ್ಯನಿರ್ವಯಿಸುತ್ತಿವೆ. ಪ್ರತಿವರ್ಷ 7ನೇ ಮತ್ತು 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿ ಶಾಲೆಯ 3 ಮಕ್ಕಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗುತ್ತಿದೆ. ಅಲ್ಲದೆ 2015-16 ಸಾಲಿನಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬಾಂಕ್‍ನಿಂದ ಪ್ರಶಸ್ತಿ ಬಂದಿದೆ.

ಸಂಘದ ಮಹಾಸಭೆ ತಾ. 25 ರಂದು (ಇಂದು) ನಡೆಯಲಿದೆ. ಸದಸ್ಯರ ಪಾಲು ಹಣದ ಮೇಲೆ ಶೇ. 10 ರ ಡಿವಿಡೆಂಟ್ ನೀಡಲು ತಿರ್ಮಾನಿಸಲಾಗಿದೆ. ಸಂಘದ ಅಧ್ಯಕ್ಷರಾಗಿ ಹೆಚ್.ಎಂ. ಕಮಲಮ್ಮ, ಉಪಾಧ್ಯಕ್ಷರಾಗಿ ಬಿ.ಜಿ. ಸುರೇಶ್ ಮತ್ತು ನಿರ್ದೇಶರಾಗಿ ಸಿ.ಪಿ. ವಿಜಯ, ಡಿ.ಎಲ್. ಮಹೆಶ್ಚಂದ್ರ, ಜಿ.ಎಂ. ಮಣಿಕೂಮಾರ್, ಎ.ವಿ. ಶಾಂತಕುಮಾರ್, ಪಿ.ಬಿ. ಅಶೋಕ್, ಜೆ.ಪಿ. ರಾಜು, ಎಸ್. ಸೀತಮ್ಮ, ಬಿ.ಟಿ. ಪ್ರಸನ್ನ, ಮುಖ್ಯಕಾರ್ಯನಿರ್ವಣಾಧಿಕಾರಿಯಾಗಿ ಕೆ.ಜಿ. ಗಣಪತಿ ಮತ್ತು ಸಂಘದ ಮೇಲ್ವಿಚಾರಕರಾಗಿ ಹೆಚ್.ಟಿ. ನವೀನ್ ಕಾರ್ಯನಿರ್ವಯಿಸುತ್ತಿದ್ದಾರೆ. - ಗಣೇಶ್ ಕುಡೆಕ್ಕಲ್.