ಮಡಿಕೇರಿ, ಅ. 18: ಮುಂಬರುವ ನ. 10ನ್ನು ಸರಕಾರ ಟಿಪ್ಪು ಜಯಂತಿಗೆಂದು ಕಳೆದ ವರ್ಷದಿಂದ ನಿಗದಿ ಪಡಿಸಿದ್ದು, ಕಳೆದ ವರ್ಷ ಆಚರಣೆ ಕೂಡ ಮಾಡಲಾಗಿದೆ. ಈ ವರ್ಷವೂ ನ. 10 ರಂದು ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾಗಿದೆ. ಈ ನಡುವೆ ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ಸಂದರ್ಭ ಉಂಟಾದ ಗಲಭೆಯಲ್ಲಿ ದುರ್ಮರ ಣಕ್ಕೀಡಾದ ವಿ.ಹಿಂ.ಪ. ಮುಖಂಡ ಕುಟ್ಟಪ್ಪ ಅವರ ನೆನಪಿಗಾಗಿ ಹುತಾತ್ಮರ ದಿನವನ್ನಾಗಿ ಆಚರಣೆ ಮಾಡುವ ಸಂಬಂಧ ಸಿದ್ಧತೆಗಳು ನಡೆಯುತ್ತಿರುವದು ಗೋಚರಿಸುತ್ತಿದೆ.

ಈ ಸಂಬಂಧ ಬೃಹತ್ ಬ್ಯಾನರ್ ಒಂದು ತಲಕಾವೇರಿ ಜಾತ್ರೆ ಸಂದರ್ಭದಿಂದ ಭಾಗಮಂಡಲದಲ್ಲಿ ರಾರಾಜಿಸುತ್ತಿದೆ. ಕೊಡಗಿನ ಸಮಸ್ತ ಬಾಂಧವರ ಪರವಾಗಿರುವ ಬ್ಯಾನರ್‍ನಲ್ಲಿ ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ ಆಚರಿಸುವ ಸಂಬಂಧ ಮಾಹಿತಿ ಇದೆ. ಮಡಿಕೇರಿಯಲ್ಲಿ ಸ್ಥಳ ಕೂಡ ನಿಗದಿಯಾಗಿರುವದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ ಯಾವ ರೀತಿಯ ನಿಲುವು ತಳೆಯಲಿದೆ ಎಂಬದೇ ಸಾರ್ವಜನಿಕರಲ್ಲಿ ಪ್ರಶ್ನೆಯಾಗಿ ಮೂಡಿದೆ...!