ಶ್ರೀಮಂಗಲ, ಸೆ. 6: ಸ್ವಾತಂತ್ರ್ಯ ಬಂದ ದಿನದಿಂದಲೂ ರಾಮ ರಾಜ್ಯದ ಕನಸು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನಿ ಹಾಗೂ ಸ್ವಾವಲಂಬನೆ ಯಿಂದ ಬದುಕು ವಂತಾದರೆ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಆದರೆ ಇದುವರೆಗೆ ಪ್ರಯತ್ನಿಸಿದರೂ ಸಫಲತೆ ಸಾಧಿಸಲಾಗಲಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲವೇ ಸಮಯಗಳಲ್ಲಿ ಈ ಕಾರ್ಯವನ್ನು ಸಾಧಿಸುವಲ್ಲಿ ಸಫಲವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಹುದಿಕೇರಿ ಕೊಡವ ಸಮಾಜದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಹುದಿಕೇರಿ, ಬಿರುನಾಣಿ, ಟಿ. ಶೆಟ್ಟಿಗೇರಿ ಎ ಮತ್ತು ಬಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಚಾರ-ವಿಚಾರ ಸಂಸ್ಕøತಿಯೊಂದಿಗೆ ಆರ್ಥಿಕ ಸಬಲತೆಗೆ ಹಾಗೂ ಸಮಾಜದ ಒಳಿತಿಗೆ ಕುಟುಂಬವು ಮೂಲ ಕಾರಣ. ಕುಟುಂಬ ಅಭಿವೃದ್ಧಿ ಯಾದರೆ ನಾಡು, ದೇಶ ಅಭಿವೃದ್ಧಿಯಾದಂತೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಮಾತನಾಡಿ, ಎಲ್ಲಾ ತರಹದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವದರೊಂದಿಗೆ ಆರ್ಥಿಕ ಸದೃಢತೆಗೆ ಸಹಕರಿಸು ತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ ಪ್ರಶಂಶನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಧರ್ಮ ಪರಿಪಾಲನೆಯ ಅಧಿಕಾರವನ್ನು ಪದಗ್ರಹಣದ ಮೂಲಕ ಪಡೆದುಕೊಂಡಿರುವ ಒಕ್ಕೂಟದ ನೂತನ ಪದಾಧಿಕಾರಿಗಳು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್ ಮಾತನಾಡಿ, ಸ್ವಚ್ಛ, ನ್ಯಾಯ, ನಿಷ್ಠೆ, ಧರ್ಮದ ಕಾರ್ಯಗಳನ್ನು ನಡೆಸುತ್ತಾ ಒಕ್ಕೂಟ ಜಿಲ್ಲೆಯಾದ್ಯಂತ ನಡೆಸುತ್ತಿರುವ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಅವರು, ಒಕ್ಕೂಟದ ಸದಸ್ಯತ್ವ ಪಡೆದುಕೊಂಡ ಪ್ರತಿಯೊಬ್ಬರಿಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕರಿಸುವ ದರೊಂದಿಗೆ ಬೇಧ-ಭಾವವಿಲ್ಲದೆ ಒಗ್ಗಟ್ಟಿನಿಂದ ಸಾಮಾಜಿಕ ಪಿಡುಗು ಗಳನ್ನು ನಿವಾರಿಸುವ ಶಕ್ತಿ ನೀಡಿದೆ. ಆದಷ್ಟು ಸಮಾಜಮುಖಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ. ವಸಂತ್, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಆರ್.ಎಂ.ಸಿ. ನಿರ್ದೇಶಕ ಚೊಟ್ಟೆಯಂಡಮಾಡ ವಿಶು ರಂಜಿ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ, ನಿಕಟಪೂರ್ವ ಅಧ್ಯಕ್ಷರಾದ ಕಿರಿಯಮಾಡ ರಾಧ ಕರುಂಬಯ್ಯ, ಪಿ.ಎಂ. ಗಣೇಶ್, ಬಿ.ಯು. ಅನಿತಾ, ಎ.ಪಿ. ರೇವತಿ, ನೂತನ ಅಧ್ಯಕ್ಷೆ ಹುದಿಕೇರಿಯ ತೀತೀರ ಊರ್ಮಿಳಾ ಸೋಮಯ್ಯ, ಟಿ. ಶೆಟ್ಟಿಗೇರಿ ಎ ಒಕ್ಕೂಟದ ಬೊಳ್ಳಜೀರ ಸುಶೀಲಾ ಅಶೋಕ್, ಟಿ. ಶೆಟ್ಟಿಗೇರಿ ಬಿ ಒಕ್ಕೂಟದ ಕಟ್ಟೇರ ಅಚ್ಚಪ್ಪ ಹಾಗೂ ಬಿರುನಾಣಿ ಒಕ್ಕೂಟದ ಕೆ.ಡಿ. ನಂಜಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ವಿವಿಧ ಒಕ್ಕೂಟಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.