ಮಡಿಕೇರಿ, ಜ. 16: ಲೋಕ ಕಲ್ಯಾಣ ಹಾಗೂ ಜಿಲ್ಲೆಯ ದೋಷ ನಿವಾರಣೆಗಾಗಿ ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪÀÇಜೆ, ಶತ ರುದ್ರಾಭಿಷೇಕ ಹಾಗೂ ಚಂಡಿಕಾ ಹೋಮಗಳು ನಡೆದು ಧಾರ್ಮಿಕ ಕೈಕಂರ್ಯದಲ್ಲಿ ಈಶ್ವರ ಭಟ್ ನೇತೃತ್ವದಲ್ಲಿ ಶತ ರುದ್ರಪಠಣ, ಬೆಳ್ಳುಕದಾಯ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯ ನಾರಾಯಣ ಪೂಜೆ, ಚಂಡಿಕಾ ಹೋಮಗಳು ಜರುಗಿತು.ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀ ಕಾಶಿಮಠದಲ್ಲಿ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ, ಉಪಾಧ್ಯಕ್ಷರು ಗಳಾದ ಅಮ್ಮತ್ತೀರ ಆರ್. ಕೃಷ್ಣಕುಮಾರ್, ಮನೆಯಪಂಡ ಕಾಂತಿ ಸತೀಶ್, ಕಾರ್ಯದರ್ಶಿ ನಾಣಯ್ಯ, ಸದಸ್ಯರುಗಳಾದ ಮುಂಡಂಡ ಬಿ. ಪೂವಪ್ಪ ಹಾಗೂ ಕೊಳ್ಳಿಮಾಡ ಪೆಮ್ಮಯ್ಯ, ಟ್ರಸ್ಟಿಗಳಾದ ಮಂಡೇಪಂಡ ಸುಜಾ ಕುಶಾಲಪ್ಪ, ಬೀನಾ ಬೊಳ್ಳಮ್ಮ, ಮೈಸೂರಿನ ಹಿರಿಯ ವಕೀಲ ಪಿ.ಡಿ. ಮೇದಪ್ಪ, ಬಿಬಿಎಂಪಿ ಮಾಜಿ ಸದಸ್ಯ ಹರೀಶ್ ಬೋಪಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.