ಮಡಿಕೇರಿ, ಆ. 25: ಶ್ರೇಷ್ಠ ನಾಯಕರಾಗಿ ಪ್ರಖ್ಯಾತಿ ಹೊಂದು ತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ದೇಶ ದ್ರೋಹಿಗಳೊಂದಿಗೆ ಕೈಜೋಡಿಸಿ ಕಾರ್ಯಾಚರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸಿಗರು ಮೋದಿಯವರನ್ನು ‘ಗೋದ್ರಾ ನರಹಂತಕ’ ಎಂದು ಬಿಂಬಿಸಿದರು. ಆದರೆ ದೇಶದ ಪ್ರಜ್ಞಾವಂತ ನಾಗರಿಕರು ತಮ್ಮ ಮತದ ಮೂಲಕವೇ ಅದಕ್ಕೆ ಉತ್ತರ ನೀಡಿದರು. ಅದಾದ ನಂತರ ಕಾಂಗ್ರೆಸಿಗರು ಚಲಾವಣೆಯಲ್ಲೇ ಇಲ್ಲದ ‘ಅಸಹಿಷ್ಣುತೆ’ ಪದವನ್ನು ಬಳಸಿ ದೇಶದೊಳಗೆ ದೊಡ್ಡ ಮಟ್ಟದಲ್ಲಿ ಧಂಗೆ ಏಳಿಸಲು ಜನರನ್ನು ಪ್ರಚೋದಿಸಿದÀರೂ ದೇಶದ ಜನತೆ ಅದಕ್ಕೂ ಕಿವಿಗೊಡ ಲಿಲ್ಲ. ಇದೀಗ ಮೋದಿಯವರನ್ನು ಹಣಿಯಲು ಕಾಂಗ್ರೆಸಿಗರು ದಲಿತ ಬಂಧುಗಳನ್ನು ವ್ಯವಸ್ಥಿತವಾಗಿ ಬಳಸಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದ್ದಾರೆ. ಮುಂದಿನ ಉತ್ತರ ಪ್ರದೇಶ, ಪಂಜಾಬ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಿನ ಜನಸಂಖ್ಯೆಯ ಶೇ. 25 ರಷ್ಟಿರುವ ದಲಿತ ಸಮುದಾಯದ ಮತಗಳನ್ನು ಕಬಳಿಸಲು ಭಾರೀ ಸಂಚು ನಡೆದಿದೆ. ಕಾಂಗ್ರೆಸ್‍ನ ಈ ಷಡ್ಯಂತರದ ವಿರುದ್ಧ ಆಯಾ ರಾಜ್ಯಗಳಲ್ಲಿ ಬಿಜೆಪಿ, ಎಸ್‍ಸಿ, ಎಸ್‍ಟಿ ಮೋರ್ಚಾಗಳು ಜನಜಾಗೃತಿ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎಂದು ರವಿ ಕುಶಾಲಪ್ಪ ತಿಳಿಸಿದ್ದಾರೆ.

ದೇಶದ್ರೋಹದ ಹೇಳಿಕೆಗಳನ್ನು ನೀಡಿದ, ದೇಶದ ವಿರುದ್ಧ ಘೋಷಣೆ ಕೂಗಿದ, ಭಯೋತ್ಪಾದಕ ಅಫÀ್ಜಲ್ ಗುರುಗೆ ಜೈಕಾರ ಹಾಕಿದ ದೆಹಲಿಯ ಜೆಎನ್‍ಯು ಸಂಘಟನೆಯ ಕನ್ಹಯ್ಯ ಕುಮಾರ್‍ನನ್ನು ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ಬೆಂಬಲಿಸಿದ್ದಾರೆ. ತನ್ನ ಸ್ವಂತ ಕುಟುಂಬವನ್ನು ಬಿಟ್ಟು ದೂರದ ಕಾಶ್ಮೀರದ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ದೇಶರಕ್ಷಣೆಗೆ ಟೊಂಕಕಟ್ಟಿ ನಿಂತು ನಮಗೆ ನೆಮ್ಮದಿಯ ಬದುಕು ಕಲ್ಪಿಸುತ್ತಿರುವ ಭಾರತೀಯ ಸೇನೆಯ ವಿರುದ್ಧವೇ ಧಿಕ್ಕಾರ ಕೂಗಿದ ದೇಶ ದ್ರೋಹಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯದ ಗೃಹಮಂತ್ರಿ ಮಾತನಾಡಿದ್ದು, ಇದು ಕಾಂಗ್ರೆಸ್ ನಾಯಕರ ನೈಜ ಮನೋಸ್ಥಿತಿ ಮತ್ತು ದೇಶಪ್ರೇಮ ಏನೆಂಬದನ್ನು ಸಾಕ್ಷೀಕರಿಸಿದೆ ಎಂದು ರವಿ ಕುಶಾಲಪ್ಪ ಆರೋಪಿಸಿದ್ದಾರೆ.

ಕಾಂಗ್ರೆಸಿಗರನ್ನು ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಪುಸ್ತಕ ಮತ್ತು ಮಾಧ್ಯಮಗಳ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸಿಗರು ಹಾಗೂ ಅಂದಿನ ಕಾಂಗ್ರೆಸ್ ಸರ್ಕಾರಗಳು ಬಿಂಬಿಸುವಲ್ಲಿ ಯಶಸ್ವಿಯಾಗಿವೆ. ಇದೇ ಕಾರಣಕ್ಕಾಗಿ ನಿಜವಾದ ಸ್ವಾತಂತ್ರ್ಯ ಹೋರಾಟ ಗಾರರ ಹೆಸರುಗಳು ತೆರೆÉಮರೆಗೆ ಸರಿಯುವಂತಾಯಿತು ಎಂದು ರವಿಕುಶಾಲಪ್ಪ ಟೀಕಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಮನಸ್ಸೋ ಇಚ್ಛೆ ಲಾಠಿ ಚಾರ್ಚ್ ಮಾಡಿ ರಕ್ತ ಹರಿಸುವ ಮೂಲಕ ವಿದ್ಯಾರ್ಥಿಗಳ ದೇಶಪ್ರೇಮ ವನ್ನು ಅವಮಾನಿಸಿರುವದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ರವಿ ಕುಶಾಲಪ್ಪ ಆರೋಪಿಸಿ ದ್ದಾರೆ. ಭಾರತೀಯ ಸೇನೆಯ ವಿರುದ್ಧವೇ ಘೋಷಣೆ ಕೂಗಿದ ದೇಶ ದ್ರೋಹಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ವಿರುದ್ಧ ಹೋರಾಟ ನಡೆಸಿದ ಎಬಿವಿಪಿಯ ಹೋರಾಟ ವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ‘ವಿದ್ಯಾರ್ಥಿಗಳ ಕಿಡ್ನಾಪ್’ ಕೇಸ್ ಸೃಷ್ಟಿಸಿರುವದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಹೇಳಿದರು. ಪ್ರಚಾರ ಗಿಟ್ಟಿಸಲು ಮತ್ತು ರಾಜಕೀಯವಾಗಿ ಮೇಲೇಳಲು ಬೇರೆ ದಾರಿ ಕಾಣದ ಪುಂಡರ ನಾಯಕ ರೊಬ್ಬರು ಮಡಿಕೇರಿ ನಗರದಲ್ಲಿ ಬೀಫ್ ಸ್ಟಾಲ್ ತೆರೆಯುವದು ತನ್ನ ಕನಸ್ಸೆಂದು ಹೇಳುತ್ತಾ ಕೋಮು ಪ್ರಚೋದನೆ ಮಾಡುತ್ತಿರುವದು ತಿರುಕನ ಕನಸ್ಸೆಂದು ರವಿಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಬೆಳವಣಿಗೆಗಳಿಗೆ ತಕ್ಕ ಉತ್ತರ ನೀಡಲು ಸುಸಂಸ್ಕøತ ಸಮಾಜ ತಯಾರಿದೆ ಎಂದು ಎಚ್ಚರಿಕೆ ನೀಡಿರುವ ಅವರು ಕುಶಾಲನಗರ ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಆರೋಪಿ ಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡಗು ಜಿಲ್ಲಾ ಆಟೋ ಚಾಲಕರ ಸಂಘ ಮತ್ತು ಇನ್ನಿತರ ಸಂಘ-ಸಂಸ್ಥೆಗಳು ನೀಡಿರುವ 2 ವಾರದ ಗಡುವಿನೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿ ಉಗ್ರ ಹೋರಾಟದ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವದೆಂದು ರವಿ ಕುಶಾಲಪ್ಪ ತಿಳಿಸಿದ್ದಾರೆ.