ಸುಂಟಿಕೊಪ್ಪ, ಜ. 9: ಸುಂಟಿಕೊಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಡಾ. ವಿರೇಂದ್ರ ಹೆಗ್ಡೆ ವಿನೂತನ ಕ್ರೀಯಾ ಯೋಜನೆ ಅನ್ವಯ ಸ್ವಚ್ಛ ಭಾರತ ನಿರ್ಮಲ ಶ್ರದ್ಧಾ ಕೇಂದ್ರದ ಪರಿಕಲ್ಪನೆಯ ಹಿನೆÀ್ನಲೆ ಶ್ರದ್ಧಾ ಕೇಂದ್ರದ ಗರ್ಭಗೃಹ ಒಳಾಂಗಣ, ಹೊರಾಂಗಣ ಪರಿಕರಗಳನ್ನು ಶುಚಿಗೊಳಿಸುವ ಕೆಲಸವನ್ನು ಶ್ರದ್ಧಾ ಕೇಂದ್ರಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

7ನೇ ಹೊಸಕೋಟೆ ಒಕ್ಕೂಟದ ವತಿಯಿಂದ 7ನೇ ಹೊಸಕೋಟೆಯ ಗಣಪತಿ ದೇವಸ್ಥಾನ, ನೂರುಲ್ ಇಸ್ಲಾಂ ಜುಮ್ಮಾ ಮಸೀದಿ, ನಾಕೂರು ಶಿರಂಗಾಲ ಒಕ್ಕೂಟದ ವತಿಯಿಂದ ನಾಕೂರು ಗಂಗಾಧೇಶ್ವರ ದೇವಸ್ಥಾನ, ಮಕ್ಕಂದೂರು ಕಾರ್ಯಕ್ಷೇತ್ರದಿಂದ ಮಾದಾಪುರ ಸಿದ್ಧಿಬುದ್ಧಿ ವಿನಾಯಕ ದೇವಸ್ಥಾನ, ಕೊಡಗರಹಳ್ಳಿ ಒಕ್ಕೂಟದ ವತಿಯಿಂದ ಪದಾಧಿಕಾರಿಗಳು ಕೊಡಗರಹಳ್ಳಿ ಸ್ಕೂಲ್‍ಬಾಣೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಜುಮ್ಮ ಮಸೀದಿ, ಚೆಟ್ಟಳ್ಳಿ ಶ್ರೀ ಭಗವತಿ ದೇವಸ್ಥಾನ, ಕೆದಕಲ್ ಒಕ್ಕೂಟದ ವತಿಯಿಂದ ಶ್ರೀ ಭದ್ರಕಾಳೇಶ್ವರಿ ದೇವಸ್ಥಾನ ಹಾಗೂ ಸುಂಟಿಕೊಪ್ಪ ಒಕ್ಕೂಟದ ವತಿಯಿಂದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನಗಳಲ್ಲಿ ಶ್ರದ್ಧಾ ಕಾರ್ಯಕ್ರಮವನ್ನು ನಡೆಸಿದರು.

ವಿವಿಧ ಗ್ರಾಮಗಳಲ್ಲಿ ಶ್ರದ್ಧಾ ಕಾರ್ಯಕ್ರಮದ ಸಂದರ್ಭ Àಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸುಂಟಿಕೊಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಸರಸ್ವತಿ ಹಾಗೂ ಸೇವಾ ಪ್ರತಿನಿಧಿಗಳಾದ ಶಿವಕುಮಾರ್, ನಿರ್ಮಲ ಪ್ರಕಾಶ್, ಜಯಲಕ್ಷ್ಮಿ, ಮಾಲಿನಿ, ಕುಸುಮ, ಜ್ಯೋತಿ ಲಕ್ಷ್ಮಿ, ಭಾಗೀರಥಿ, ರಜನಿ ಇದ್ದರು.