ಗೋಣಿಕೊಪ್ಪಲು, ಜ.30: ಇಲ್ಲಿಗೆ ಸಮೀಪ ದೇವರಪುರ ಸಾವಿರಬಟ್ಟಿ ಕಾಫಿ ತೋಟದ ಹಾದಿಯಲ್ಲಿ ತಾ.29 ರಂದು ಸಂಜೆ ಗೋಣಿಕೊಪ್ಪಲಿನ ಸ್ನೇಕ್ ಶರತ್ ಹಾಗೂ ಸ್ನೇಕ್ ಬಾವೆ ಸೆರೆಹಿಡಿದ ಹೆಣ್ಣು ಕಾಳಿಂಗವನ್ನು ಇಂದು ಮಾಕುಟ್ಟ ವನ್ಯಜೀವಿ ವಲಯದಲ್ಲಿ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಬಿಡುಗಡೆಗೊಳಿ ಸಲಾಯಿತು. ಸುಮಾರು ಎಂಟೂವರೆ ಕೆ.ಜಿ.ತೂಕದ 10 ಅಡಿ ಉದ್ದದ 6-7 ವರ್ಷ ಪ್ರಾಯದ ಕಾಳಿಂಗ ಪಶ್ಚಿಮ ಘಟ್ಟದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಡ್ಗಿಚ್ಚಿಗೆ ಬೆದರಿ ಜನವಸತಿ ಇರುವ ದೇವರಪುರದತ್ತ ಬಂದಿರಬಹುದೆಂದು ಶರತ್ ಅಂದಾಜಿಸಿದ್ದಾರೆ.ಇಂದು ಗೋಣಿಕೊಪ್ಪಲು ನಗರದಲ್ಲಿ ಸಾರ್ವಜನಿಕರಿಗೆ ಕಾಳಿಂಗ ಸರ್ಪದ ದರ್ಶನ ಮಾಡಿಕೊಟ್ಟ ಸಂದರ್ಭ ಭಯ ಮಿಶ್ರಿತ ಕಣ್ಣುಗಳಿಂದ ನೂರಾರು ಮಂದಿ ಕುತೂಹಲದಿಂದ ವೀಕ್ಷಣೆ ಮಾಡಿದರು.ಕಳೆದ ವಾರ ಈಚೂರು-ನಾಡುಗುಂಡಿ ವ್ಯಾಪ್ತಿಯಲ್ಲಿ ಸುಮಾರು 7 ಕೆ.ಜಿ.ತೂಕದ, 9 ಅಡಿ ಉದ್ದ ಹಾಗೂ 6 ವರ್ಷ ಪ್ರಾಯದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮಾಕುಟ್ಟ ಅರಣ್ಯದಲ್ಲಿ ಬಿಡುಗಡೆಗೊಳಿಸುವದ ರೊಂದಿಗೆ ಸ್ನೇಕ್ ಶರತ್ ಅವರು ಈವರೆಗೆ ಸುಮಾರು 15 ಕಾಳಿಂಗ ವನ್ನು ರಕ್ಷಣೆ ಮಾಡಿದಂತಾಗಿದೆ. ನಾಗರಹಾವು ಒಳಗೊಂಡಂತೆ ಶರತ್ ಅವರು ಈವರೆಗೂ ಸುಮಾರು 2 ಸಾವಿರಕ್ಕೂ ಅಧಿಕ ಉರಗವನ್ನು ಸೆರೆಹಿಡಿದು ಪಕ್ಕದ ಕಾಡಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಮೈಸೂರಿನ ಸ್ನೇಕ್ ಶ್ಯಾಮ್ ಹಾಗೂ ಇದೀಗ
(ಮೊದಲ ಪುಟದಿಂದ) ಇನ್‍ಫೆÇೀಸಿಸ್ ಉದ್ಯೋಗಿಯಾಗಿರುವ ಸ್ನೇಕ್ ಸತೀಶ್ ಅವರ ಉರಗಪ್ರೇಮವನ್ನು ಗಮನಿಸಿ, ತಾನೂ ಹಾವುಗಳ ರಕ್ಷಣೆಗೆ ಮುಂದಾದೆ ಎಂದು ಹೇಳಿದರು.
ಉರಗವನ್ನು ಕಂಡಲ್ಲಿ ಗುಂಡು ಹೊಡೆಯಬೇಡಿ, ಅವುಗಳ ಗೂಡಿಗೆ ಪೆಟ್ರೋಲ್ ಹಚ್ಚಿ ಸುಡಬೇಡಿ. ಯಾವದೇ ಹಾವು ಕಂಡಲ್ಲಿ ರಕ್ಷಣೆಗಾಗಿ 9449260053 ಸಂಖ್ಯೆಗೆ ಕರೆಮಾಡಲು ತಿಳಿಸಿದ್ದಾರೆ.
-ವರದಿ: ಟಿ.ಎಲ್. ಶ್ರೀನಿವಾಸ್