*ಗೋಣಿಕೊಪ್ಪಲು, ಆ. 10: ರೋಟರಿ ಕ್ಲಬ್ ಗೋಣಿಕೊಪ್ಪ ವತಿಯಿಂದ ಕಾಡ್ಲಯ್ಯಪ್ಪ ದೇವಸ್ಥಾನದ ದೇವರಕಾಡು ಪುನಶ್ಚೇತನ ಕಾರ್ಯಕ್ರಮ ನಡೆಸಲಾಯಿತು.

200ಕ್ಕೂ ಹೆಚ್ಚು ಕಾಡು ಗಿಡಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗಿಡಗಳನ್ನು ನೆಟ್ಟರು. ದೇವರಕಾಡು ಸ್ಥಳದ ಮಹಿಮೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಅಶೋಕ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಡು ಗಿಡಗಳ ಬಗ್ಗೆ ಅರಣ್ಯ ಕಾಲೇಜಿನ ಡಾ. ಸಿ.ಜಿ. ಕುಶಾಲಪ್ಪ, ಡಾ. ರಾಮಕೃಷ್ಣ ಹೆಗ್ಗಡೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ಟಿ.ಯು. ನರೇಂದ್ರ, ಕಾರ್ಯದರ್ಶಿ ಕಾಡ್ಯಮಾಡ ನವೀನ್, ರೋಟರಿ ಯನ್ ಡಾ. ಚಂದ್ರಶೇಖರ್, ಯಶೋದ, ಸುಮಿ ಸುಬ್ಬಯ್ಯ, ರೀಟಾ ದೇಚಮ್ಮ, ರಾಜೇಶ್ವರಿ, ಇಮ್ಮಿ ಉತ್ತಪ್ಪ, ಪವಿತ್ರ, ಸರ್ವದೈವತಾ ಶಾಲೆಯ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.