ಗೋಣಿಕೊಪ್ಪಲು, ಜ. 29 : ದೃಢ ನಿರ್ಧಾರಗಳಿಂದ ವ್ಯಕ್ತಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಜರ್ಮನಿಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಶ್ರೀ ಬಾಣೇಶ್ನಂದಾ ಸ್ವಾಮಿ ಅಭಿಪ್ರಾಯಪಟ್ಟರು.ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆದ ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತ ಜಯಂತ್ಯೋತ್ಸವ ಅಂಗವಾಗಿ ಯುವ ಜನತೆಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಜನತೆ ವಿದ್ಯಾಭ್ಯಾಸದ ಸಮಯದಲ್ಲಿ ಶಿಸ್ತು ಸಮಯಪಾಲನೆ ಮೈಗೂಡಿಸಿಕೊಳ್ಳ ಬೇಕು. ದೃಢನಿರ್ಧಾರಗಳನ್ನು ಕೈಗೊಳ್ಳಲು ಚಿಂತನಾ ಶೀಲರಾಗ ಬೇಕು. ಸಮಯಕ್ಕೆ ಬೆಲೆ ನೀಡುವಂತಾ ಗಬೇಕು ಎಂದರು.
ಜರ್ಮನ್ನಲ್ಲಿ ಬ್ಯಾಂಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಉದ್ಯಮಿ ವಸಂತ್ ಧನ್ಯ ಮಾತನಾಡಿ, ಬುದ್ದಿಯನ್ನು ಉಪಯೋಗಿಸಿ ಕೊಳ್ಳದಿರುವದು ನಮ್ಮ ದೇಶ ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳಲು ಕಾರಣವಾಗಿದೆ. ಪ್ರಾಮಾಣಿಕತೆ ಬೆಳೆಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಶಾರದಾಶ್ರಮದ ವಿಶ್ರಾಂತ ಸ್ವಾಮೀಜಿ ಜಗದಾತ್ಮನಂದಾ ಮಹರಾಜ್, ಕ್ಯಾಲಿಕಟ್ ಆಶ್ರಮದ ಪುಣ್ಯಾತ್ಮ ನಂದಾಜೀ, ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋಧಸ್ವರೂಪ ನಂದಜೀ, ಕೂರ್ಗ್ ಎಜುಕೇಷನ್ ಫಂಡ್ನ ಮುಖ್ಯಸ್ಥ ಕೆ. ಪಿ ಉತ್ತಪ್ಪ ಹಾಗೂ ಸ್ವಾಮಿ ಪರಹಿತನಂದಾಜೀ ಇದ್ದರು. ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ಪೊನ್ನಂಪೇಟೆ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಂದರ್ಭ ಉಚಿತ ಬಟ್ಟೆ ವಿತರಿಸ ಲಾಯಿತು.